ಮುಂಬೈ: ಲಾಕ್ಡೌನ್ ಸಮಯದಲ್ಲಿ ವಿದ್ಯುತ್ ಬಿಲ್‌ಗಳು ಅನಿರೀಕ್ಷಿತವಾಗಿ ಏರಿಕೆಯಾಗುತ್ತಿರುವ ಬಗ್ಗೆ ನಟಿ ತಾಪ್ಸಿ ಪನ್ನು, ಹುಮಾ ಖುರೇಷಿ ಮತ್ತು ನಿರ್ದೇಶಕ ಬಿಜೋಯ್ ನಂಬಿಯಾರ್ ಕಳವಳ ವ್ಯಕ್ತಪಡಿಸಿದ್ದಾರೆ
ತಾಪ್ಸಿ ಏಪ್ರಿಲ್ನಿಂದ ಜೂನ್ವರೆಗೆ ತನ್ನ ವಿದ್ಯುತ್ ಬಿಲ್ನ ಸ್ಕ್ರೀನ್ಶಾಟ್ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, ವಿದ್ಯುತ್ ಸರಬರಾಜುದಾರ ಅದಾನಿ ವಿದ್ಯುತ್ ಕಂಪನಿಗೆ ಟ್ಯಾಗ್ ಮಾಡಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಿಗೆ ತನ್ನ ಬಿಲ್ ಮೊತ್ತ 3,000 - 4000 ರೂ.ಗಳಷ್ಟಿತ್ತು. ಆದರೆ ಪ್ರಸಕ್ತ ತಿಂಗಳಿಗೆ 36,000 ರೂ. ಚಾರ್ಜ್ ಮಾಡಲಾಗಿದೆ ಎಂದು ತಾಪ್ಸಿ ಹೇಳಿದ್ದಾರೆ. ಬಳಕೆಯಲ್ಲಿಲ್ಲದ ತನ್ನ ಇನ್ನೊಂದು ಅಪಾರ್ಟ್‌ಮೆಂಟ್‌ಗೆ 8,640 ರೂ. ಬಿಲ್ ಬಂದಿದೆ ಎಂದಿದ್ದಾರೆ.
ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್ (ಎಇಎಂಎಲ್) ವಕ್ತಾರರು ನಾವು ಮೀಟರ್ ರೀಡಿಂಗ್ ಪರಿಶೀಲಿಸಿದ್ದು, ಅದು ಸರಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಪ್ಸಿ ಅವರ ಟ್ವೀಟ್‌ಗೆ ಉತ್ತರಿಸಿದ ನಟ ಪುಲ್ಕಿತ್ ಸಾಮ್ರಾಟ್ ತಮ್ಮ ಎಲೆಕ್ಟ್ರಿಸಿಟಿ ಬಿಲ್ 30,000 ರೂ. ಬಂದಿರುವುದಾಗಿ ಹೇಳಿದ್ದಾರೆ.
ನಟಿ ರೇಣುಕಾ ಶಹಾನೆ ಕೂಡ ತನ್ನ ಬಿಲ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಮೇ ತಿಂಗಳಿಗೆ ತನಗೆ 5,510 ರೂ. ಬಿಲ್ ಬಂದಿತ್ತು. ಆದರೆ, ಜೂನ್ನಲ್ಲಿ ಬೆಲೆ ತುಂಬಾ ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು 6,000 ರೂ. ಆಗಿದ್ದ ಬಿಲ್ ಈ ತಿಂಗಳು 50,000 ರೂ.ಗೆ ಏರಿದೆ ಎಂದು ನಟಿ ಹುಮಾ ಖುರೇಷಿ ಕೂಡಾ ಹೇಳಿದ್ದಾರೆ.
ಈ ಹೊಸ ಬೆಲೆ ಏರಿಕೆ ಏನು? ದಯವಿಟ್ಟು ನಮಗೆ ಸರಿಯಾದ ಮಾಹಿತಿ ನೀಡಿ ಎಂದು ನಿರ್ದೇಶಕ ಬಿಜೋಯ್ ನಂಬಿಯಾರ್ ಹೇಳಿದ್ದಾರೆ.
ಹಾಸ್ಯನಟ ವೀರ್ ದಾಸ್ ಕೂಡಾ ಮುಂಬೈಯಲ್ಲಿ ಬೇರೆ ಯಾರಿಗಾದರೂ ಸಾಮಾನ್ಯ ಪಾವತಿಸುವ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ವಿದ್ಯುತ್ ಬಿಲ್ ಸಿಕ್ಕಿದೆಯೇ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಉಲ್ಲೇಖಿಸಿ ನಟಿ ನೇಹಾ ಧೂಪಿಯಾ, ಡಿನೋ ಮೊರಿಯಾ ಮತ್ತು ಮೊಹಮ್ಮದ್ ಝೀಶನ್ ಅಯೂಬ್ ಸೇರಿದಂತೆ ಹಲವರು ತಾವು ಕೂಡಾ ಬಿಲ್ ಏರಿಕೆಯ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.
ನಿರ್ಮಾಪಕ ನೀರಜ್ ಘೈವಾನ್ ಅವರು ವಿದ್ಯತ್ ಬೆಲೆ ಏರಿಕೆ ಹಾಸ್ಯಾಸ್ಪದವಾಗಿದೆ. ಹಲವಾರು ದೂರುಗಳ ಹೊರತಾಗಿಯೂ, ಅದಾನಿ ವಿದ್ಯುತ್ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.