ಮುಂಬೈ:ಅನುಮತಿಯಿಲ್ಲದೇ ಬಹುಮಹಡಿ ಕಟ್ಟಡವನ್ನು ಹೋಟೆಲ್ ಆಗಿ ಪರಿವರ್ತಿಸಿದ ಆರೋಪದಡಿ ನಟ ಸೋನು ಸೂದ್ ವಿರುದ್ಧ ಬೃಹನ್ ಮುಂಬೈ ಮಹಾನಗರ ಪಾಲಿಕೆ ದೂರನ್ನ ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ.
ಸೋನು ಸೂದ್ ವಿರುದ್ಧ ಬಿಎಂಸಿ ದೂರು: ನಟನ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್ - ಬಾಂಬೆ ಹೈಕೋರ್ಟ್ ಲೇಟೆಸ್ಟ್ ನ್ಯೂಸ್
ಆರು ಅಂತಸ್ತಿನ ಕಟ್ಟಡವನ್ನು ಪಾಲಿಕೆಯ ಅನುಮತಿ ಪಡೆಯದೇ ಸೋನು ಸೂದ್ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎಂಬ ಬಿಎಂಸಿ ದೂರಿನ್ನು ಕುರಿತು ಬಾಂಬೆ ಹೈಕೋರ್ಟ್ ಇಂದು ತನ್ನ ಆದೇಶ ಪ್ರಕಟಿಸಿದ್ದು, ಸೋನು ಸೂದ್ ಅರ್ಜಿಯನ್ನ ವಜಾ ಮಾಡಿದೆ.

ಸೋನು ಸೂದ್
ಮುಂಬೈನ ಜುಹು ಪ್ರದೇಶದಲ್ಲಿರುವ ಶಕ್ತಿ ನಗರ್ ಎಂಬ ಆರು ಅಂತಸ್ತಿನ ಕಟ್ಟಡವನ್ನು ಪಾಲಿಕೆಯ ಅನುಮತಿ ಪಡೆಯದೇ ಸೋನು ಸೂದ್ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ. ಇದರ ವಿರುದ್ಧ ಮಹಾರಾಷ್ಟ್ರ ಪ್ರದೇಶ ಮತ್ತು ಪಟ್ಟಣ ಯೋಜನೆ (ಎಂಆರ್‌ಟಿಪಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಜುಹು ಪೊಲೀಸರಿಗೆ ಬಿಎಂಸಿ ಆಗ್ರಹಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್, ಇಲ್ಲಿ ಯಾವುದೇ ಅವ್ಯವಹಾರವಿಲ್ಲ. ನಾನು ಬಿಎಂಸಿ ಅನುಮತಿ ಪಡೆದಿದ್ದು, ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (MCZMA) ಅನುಮತಿಗಾಗಿ ಕಾಯುತ್ತಿದ್ದೆ ಎಂದು ಹೇಳಿದ್ದರು.
Last Updated : Jan 21, 2021, 11:24 AM IST