ಕರ್ನಾಟಕ

karnataka

ETV Bharat / sitara

ಸುಶಾಂತ್ ಕೇಸ್​​​​​​​​​​​​​​​​​​ ಸಿಬಿಐಗೆ ಒಪ್ಪಿಸುವಂತೆ ಕೋರಿ ಪಿಐಎಲ್​​​​​​​​​​​​​​​​​​​​​​​​​​​...ಇಂದು ಮುಂಬೈ ಹೈಕೋರ್ಟ್​ನಿಂದ ವಿಚಾರಣೆ - ಬಾಲಿವುಡ್ ನಟಿ ರಿಯಾ ಚಕ್ರವರ್ತಿ

ಜೂನ್ 14 ರಂದು ಮುಂಬೈ ಬಾಂದ್ರಾದ ತಮ್ಮ ಅಪಾರ್ಟ್​ಮೆಂಟ್​​​ನಲ್ಲಿ ಆತ್ಮಹತ್ಯೆ ಶರಣಾದ ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನು ಇಂದು ಮುಂಬೈ ಹೈಕೋರ್ಟ್ ನಡೆಸಲಿದೆ.

Sushant Singh Rajput
ಸುಶಾಂತ್ ಕೇಸ್​​​​​​​​​​​​​​​​​​ ಸಿಬಿಐಗೆ

By

Published : Aug 4, 2020, 10:06 AM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ನೇತೃತ್ವದ ನ್ಯಾಯಪೀಠ ಈ ವಿಚಾರಣೆ ನಡೆಸಲಿದೆ.

ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸಮೀತ್ ಥಕ್ಕರ್ ಎಂಬುವವರು ತಮ್ಮ ಲಾಯರ್ ರಸ್ಪಾಲ್​​ ಸಿಂಗ್ ರೇಣು ಎಂಬುವವರ ಮೂಲಕ ಪಿಐಎಲ್​ ಸಲ್ಲಿಸಿದ್ದರು. ಕೆಲವು ದಿನಗಳ ಹಿಂದೆ ನಟಿ ರಿಯಾ ಚಕ್ರವರ್ತಿ ಈ ಪ್ರಕರಣದ ವಿಚಾರಣೆಯನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸುಶಾಂತ್ ಪ್ರಕರಣದಲ್ಲಿ ಕಾನೂನುಬದ್ಧವಾಗಿ ತನಿಖೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರಿಗೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲ ಎಂದು ರಿಯಾ ಪರ ವಕೀಲ ಸತೀಶ್​​​​ ಮನೆಶಿಂಧೆ ಹೇಳಿದ್ದಾರೆ.

ರಿಯಾ ಚಕ್ರವರ್ತಿ

ಅಲ್ಲದೆ ರಿಯಾ ಚಕ್ರವರ್ತಿ ಹೆಚ್ಚಾಗಿ ಮುಂಬೈನಲ್ಲೇ ನೆಲೆಸಿರುತ್ತಾರೆ. ಸುಶಾಂತ್ ಸಾವನ್ನಪ್ಪಿದ ದಿನ ಜೂನ್ 14 ರಂದು ಕೂಡಾ ರಿಯಾ ಮುಂಬೈನಲ್ಲಿದ್ದರು. ಸುಶಾಂತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೇವಲ 20 ಮಂದಿಗೆ ಮಾತ್ರ ಅವಕಾಶವಿತ್ತು. ಆದರೆ ಆ 20 ಮಂದಿಯಲ್ಲಿ ರಿಯಾ ಹೆಸರಿರಲಿಲ್ಲ. ಜೂನ್ 18 ರಂದು ರಿಯಾ ಚಕ್ರವರ್ತಿಯನ್ನು ಬಾಂದ್ರಾ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ನಂತರ ಮತ್ತೆ ಜುಲೈ 17 ರಂದು ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲೂ ಕೂಡಾ ಆಕೆ ವಿಚಾರಣೆ ಎದುರಿಸಿದ್ದಾರೆ ಎಂದು ಲಾಯರ್ ಸತೀಶ್ ಹೇಳಿದ್ದಾರೆ.

ಇದಾದ ನಂತರ ಬಿಹಾರ್​​ನ ಪಾಟ್ನಾದಲ್ಲಿ ದಾಖಲಾಗಿರುವ ಎಫ್​​​ಐಆರ್​ಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಮುಂಬೈಗೆ ತನಿಖೆಗೆ ಬಂದಿದ್ದರು. ಈ ವೇಳೆ ರಿಯಾ ಚಕ್ರವರ್ತಿ, ತನಿಖೆಯನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಮುಂಬೈನಲ್ಲಿ ಆದ್ದರಿಂದ ಪ್ರಕರಣ ವಿಚಾರಣೆ ಮುಂಬೈನಲ್ಲಿ ನಡೆಯುವಂತೆ ಕೋರಿ ರಿಯಾ ಅರ್ಜಿ ಸಲ್ಲಿಸಿದ್ದಾರೆ. ಬಿಹಾರ ಪೊಲೀಸರು ತನಿಖೆ ನಡೆಸಲು ಕಾನೂನಿನ ಪ್ರಕಾರ ಯಾವುದೇ ನಿರ್ದಿಷ್ಟ ವ್ಯಾಪ್ತಿಯಿಲ್ಲ. ಪೊಲೀಸರು ಪ್ರಕರಣದ ವಿಚಾರಣೆಗೆ ಕರೆದಾಗಲೆಲ್ಲಾ ರಿಯಾ ಸಹಕರಿಸಿದ್ದಾರೆ. ಮುಂದೆಯೂ ಕೂಡಾ ಆಕೆ ಪೊಲೀಸರು ಕರೆದಾಗ ಹಾಜರಾಗಲು ಸಿದ್ಧರಿದ್ದಾರೆ. ಈಗಾಗಲೇ 2 ಬಾರಿ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ರಿಯಾ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ರಿಯಾ ಪರ ವಕೀಲ ಸತೀಶ್ ಹೇಳಿದ್ದಾರೆ.

ಸುಶಾಂತ್ ತಂದೆ ಕೆ.ಕೆ. ಸಿಂಗ್ ಬಿಹಾರದ ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದ ಕಾರಣ ಬಿಹಾರ ಪೊಲೀಸರು ಪ್ರಕರಣದ ತನಿಖೆಗಾಗಿ ಮುಂಬೈಗೆ ಬಂದಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details