ದೇಶವೇ ಹೆಮ್ಮೆ ಪಡುವಂತಹ ಕೆಲಸವನ್ನು ನಮ್ಮ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಾಡಿದೆ. ಶನಿವಾರ ರಾತ್ರಿ ಚಂದ್ರಯಾನ 2ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯಿತು ಎಂಬಷ್ಟರಲ್ಲಿ ಅದರ ಸಂಪರ್ಕ ಕಡಿತವಾಗಿದೆ. ಇದರಿಂದ ಅಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ವಿಜ್ಞಾನಿಗಳಿಗೆ ಲಭ್ಯವಾಗುತ್ತಿಲ್ಲ. ಇದರಿಂದ ಇಸ್ರೋ ಅಧ್ಯಕ್ಷ ಶಿವನ್ ಆತಂಕಕ್ಕೆ ಒಳಗಾಗಿದ್ದರು.
ಆದ್ರೆ ಈ ಬಗ್ಗೆ ಬಾಲಿವುಡ್ನ ಪ್ರಮುಖ ತಾರೆಯರು ಟ್ವೀಟ್ ಮೂಲಕ ವಿಜ್ಞಾನಿಗಳಿಗೆ ಶುಭ ಕೋರಿದ್ದು, ನಿಮ್ಮ ದಿಟ್ಟ ಹೆಜ್ಜೆ ಹೀಗೆಯೇ ಮುಂದುವರೆಯಲಿ. ಇದು ಸಹ ಯಶಸ್ವಿಯ ಹಂತ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ಡೀಟ್ ಮಾಡಿರುವ ಶಾರುಕ್ ಖಾನ್, ನಾವು ಕೆಲವು ಬಾರಿ ನಮ್ಮ ಗುರಿಯನ್ನು ತಲುಪಲು ಆಗದೇ ಇರಬಹುದು. ಆದ್ರೆ ನಮ್ಮ ಸ್ಥೈರ್ಯ ಮತ್ತು ನಂಬಿಕೆಯನ್ನು ಕಳೆದುಕೊಳ್ಳಬಾರದು. ಈ ಬಾರಿಯ ನಮ್ಮ ಪ್ರಯತ್ನ ಕೊನೆಯದಲ್ಲ ಎಂದು ಹೇಳಿದ್ದು, ಇಸ್ರೋ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.