ಕರ್ನಾಟಕ

karnataka

ETV Bharat / sitara

ಕನ್ನಡದ ನಂಟಿರುವ 'ಮಿಷನ್ ಮಂಗಳ' ಟ್ರೇಲರ್ ರಿಲೀಸ್​ - ಟ್ರೇಲರ್ ರಿಲೀಸ್​

ಕರ್ನಾಟಕ ಹಾಗೂ ಕನ್ನಡದ ನಂಟು ಬೆಸೆದುಕೊಂಡಿರುವ ಬಾಲಿವುಡ್​ 'ಮಿಷನ್ ಮಂಗಳ' ಚಿತ್ರದ ಟ್ರೇಲರ್​ ಇಂದು ರಿಲೀಸ್​ ಆಗಿದೆ.

ಮಿಷನ್ ಮಂಗಳ

By

Published : Jul 18, 2019, 5:11 PM IST

ಮಂಗಳ ಗ್ರಹಕ್ಕೆ ಭಾರತೀಯರ ಉಪಗ್ರಹ ಉಡಾವಣೆಯ ನೈಜ ಕಥೆಯಾಧಾರಿತ ಈ ಚಿತ್ರದಲ್ಲಿ ರಾಕೇಶ್​ ಧವನ್ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್, ತಾರಾ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದಾರೆ. ಕನ್ನಡದ ಹಿರಿಯ ನಟ ದತ್ತಣ್ಣ, ನಿತ್ಯಾ ಮೆನನ್‌, ಸೋನಾಕ್ಷಿ ಸಿನ್ಹಾ ಸೇರಿ ಪ್ರಮುಖ ಸ್ಟಾರ್‌ ನಟ-ನಟಿಯರು ಈ ಚಿತ್ರದಲ್ಲಿದ್ದಾರೆ.

ಭಾರತೀಯ ಅದ್ಭುತ ವಿಜ್ಞಾನಿಗಳ ತಂಡ ಕಡಿಮೆ ವೆಚ್ಚದಲ್ಲಿ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸುವ ರೋಚಕ ಕಥೆಯ ಚಿತ್ರಕ್ಕೆ ಕನ್ನಡಿಗರೇ ಆದ ಜಗನ್ ಶಕ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಭಾರತೀಯರ ಸಾಧನೆ' ಬಿಂಬಿಸುವ ಈ ಸಿನಿಮಾ ಬೆಂಗಳೂರಿನಲ್ಲಿಯೂ ಚಿತ್ರೀಕರಣವಾಗಿದೆ. ಹಾಸನದಲ್ಲಿರುವ ಇಸ್ರೋ ಕೇಂದ್ರವನ್ನು ಮರುಸೃಷ್ಟಿ ಮಾಡಲಾಗಿದೆ. ಇದು ಬಾಹ್ಯಾಕಾಶದ ಕುರಿತು ತಯಾರಾಗುತ್ತಿರುವ ಸಿನಿಮಾ. ಆಗಸ್ಟ್​ 15ರಂದು ದೇಶ್ಯಾದ್ಯಂತ ಈ ಸಿನಿಮಾ ತೆರೆಗೆ ಬರಲಿದೆ.

ABOUT THE AUTHOR

...view details