ಕರ್ನಾಟಕ

karnataka

ETV Bharat / sitara

ಶಾಹೀದ್​​ನ ಕೈ ಹಿಡಿದ 'ಕಬೀರ್​ ಸಿಂಗ್'... ಇದುವರೆಗೆ ಗಳಿಸಿದ್ದು ಎಷ್ಟು ಕೋಟಿ ? - ಕಬೀರ್​ ಸಿಂಗ್

ಹಿಂದಿಯ 'ಕಬೀರ್ ಸಿಂಗ್' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ದಿನದಿಂದ ದಿನಕ್ಕೆ ಗಳಿಕೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತ ಮುನ್ನುಗ್ಗುತ್ತ ನಿರ್ಮಾಪಕರ ಜೇಬು ತುಂಬಿಸುತ್ತಿದೆ.

ಕಬೀರ್​ ಸಿಂಗ್

By

Published : Jul 1, 2019, 8:20 PM IST

ಶಾಹೀದ್ ಕಪೂರ್​ ಹಾಗೂ ಕೈರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿವ ಆ್ಯಕ್ಷನ್​-ರೊಮ್ಯಾಂಟಿಕ್ ಸಿನಿಮಾ ಕಬೀರ್ ಸಿಂಗ್ ಬಿಟೌನ್​ಲ್ಲಿ ಗೆಲುವಿನ ನಗೆ ಬೀರಿದೆ. ಇದು ಟಾಲಿವುಡ್​​ನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಆಗಿದ್ದರೂ ಕೂಡ ಭರ್ಜರಿ ರೆಸ್ಪಾನ್ಸ್​ ಗಿಟ್ಟಿಸಿಕೊಳ್ಳುತ್ತಿದೆ. ಎಲ್ಲೆಡೆ ಅಮೋಘ ಪ್ರದರ್ಶನ ಕಾಣುವ ಮೂಲಕ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದೆ. ಮೊದಲ ವಾರವೇ 134 ಕೋಟಿ ಬಾಚಿಕೊಂಡಿದ್ದ ಈ ಚಿತ್ರ ಇದುವರೆಗೆ ಬರೋಬ್ಬರಿ ₹181 ಕೋಟಿ ಗಳಿಸಿದೆ ಎನ್ನಲಾಗಿದೆ. ಇನ್ನೊಂದೆರಡು ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಲಿದೆ.

ಇನ್ನು ಶಾಹೀದ್​ ಕಪೂರ್​​ಗೆ 'ಕಬೀರ್ ಸಿಂಗ್' ದೊಡ್ಡ ಬ್ರೇಕ್ ನೀಡಿದೆ. ಅವರ ಹಿಟ್ ಚಿತ್ರಗಳ ಲಿಸ್ಟ್​​​ಗೆ ಈ ಚಿತ್ರ ಸೇರಿಕೊಂಡಿದೆ. ಮೊದಲೇ ಹೇಳಿದಂತೆ ರಿಮೇಕ್ ಚಿತ್ರವಾದರೂ ಗಳಿಕೆ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.

ABOUT THE AUTHOR

...view details