ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆಯನ್ನು ಬೇರೆಡೆ ತಿರುಗಿಸಲು ಡ್ರಗ್ಸ್ ಪ್ರಕಣದ ಬಗ್ಗೆ ಮಾತನಾಡಲಾಗುತ್ತಿದೆ ಎಂದು ನಟಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ನಗ್ಮಾ ಆರೋಪಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿಯ ಜಯಪ್ರದಾ ಅವರ ವಿರುದ್ಧ ನಗ್ಮಾ ಕಿಡಿಕಾರಿದ್ದಾರೆ.
ಸುಶಾಂತ್ ಪ್ರಕರಣದ ವಿಚಾರಣೆಯನ್ನು ಮರೆಸಲು ಡ್ರಗ್ಸ್ ಬಗ್ಗೆ ಮಾತನಾಡಲಾಗುತ್ತಿದೆ...ನಗ್ಮಾ ಆರೋಪ - Sushant sing rajaput suicide case
ಸುಶಾಂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ಕೈ ಬಿಡುವ ಉದ್ದೇಶದಿಂದ ಈಗ ಡ್ರಗ್ಸ್ ವಿಚಾರಣೆ ಎಂಬ ಕಾರಣ ಹೇಳಲಾಗುತ್ತಿದೆ ಎಂದು ನಟಿ, ಕಾಂಗ್ರೆಸ್ ಸದಸ್ಯೆ ನಗ್ಮಾ ಆರೋಪಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ನಗ್ಮಾ, ಬಿಜೆಪೆ ಸದಸ್ಯೆ ಜಯಪ್ರದಾ ವಿರುದ್ಧ ಹರಿಹಾಯ್ದಿದ್ದಾರೆ. 'ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಏನಾಯ್ತು ಉತ್ತರಿಸಿ ಎಂದು ಸಿಬಿಐ, ಎನ್ಸಿಬಿ, ಇಡಿ ಹಾಗೂ ಜಯಪ್ರದಾ ಅವರನ್ನು ನಗ್ಮಾ ಪ್ರಶ್ನಿಸಿದ್ದಾರೆ. ಬಹಳ ದಿನಗಳಿಂದ ನಾವೆಲ್ಲರೂ ಸತ್ಯ ಏನು ಎಂದು ತಿಳಿಯಲು ಕಾಯುತ್ತಿದ್ದೇವೆ. ಆದರೆ ನಿಜ ಏನು ಎಂದು ಹೊರಗೆ ಬರುತ್ತಿಲ್ಲ. ಈ ಪ್ರಕರಣದ ವಿಚಾರಣೆಯನ್ನು ಮರೆಸಲು ಇದೀಗ ಡ್ರಗ್ಸ್ ಎಂಬ ಕಾರಣ ಹೇಳಲಾಗುತ್ತಿದೆ' ಎಂದು ನಗ್ಮಾ ನಿನ್ನೆ ಟ್ವೀಟ್ ಮಾಡಿದ್ದಾರೆ.
'ಬಾಲಿವುಡ್ ಡ್ರಗ್ಸ್ಗೆ ಅಡಿಕ್ಟ್ ಆಗಿದೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಪ್ರತಿಕ್ರಿಯಿಸಿದ್ದರು. ಇದನ್ನು ಜಯಪ್ರದಾ ಕೂಡಾ ಬೆಂಬಲಿಸಿದ್ದರು. ಈ ವಿಚಾರವಾಗಿ ಕೋಪಗೊಂಡಿರುವ ನಗ್ಮಾ, ವಿಚಾರಣೆಯನ್ನು ಸುಶಾಂತ್ ಸಾವಿನಿಂದ ಡ್ರಗ್ಸ್ ಕಡೆಗೆ ತಿರುಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ಹಿಂದಿ ಕಿರುತೆರೆ ನಟಿ ಕಾಮ್ಯ ಪಂಜಾಬಿ ಕೂಡಾ ಟ್ವೀಟ್ ಮಾಡಿ, ಸುಶಾಂತ್ ಸಾವಿನ ಪ್ರಕರಣದಿಂದ ಆರಂಭವಾದ ವಿಚಾರಣೆ ಸುಶಾಂತ್ಗೆ ನ್ಯಾಯ ಒದಗಿಸಿ ಎಂಬ ಮಾತಿನಿಂದ ಕಂಗನಾಗೆ ನ್ಯಾಯ ಒದಗಿಸಿ ಎಂದು ಬದಲಾಯ್ತು. ಈಗ ರವಿಕಿಶನ್ಗೆ ನ್ಯಾಯ ಒದಗಿಸಿ ಎಂದು ಬದಲಾಗಿದೆ. ನಾಳೆ ಏನಾಗುವುದೋ ಯಾರಿಗೆ ಗೊತ್ತು..? ಆದರೆ ಇದೆಲ್ಲದರ ನಡುವೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವಿಚಾರಣೆಯನ್ನು ಎಲ್ಲರೂ ಮರೆಯುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದರು.