ಮುಂಬೈ: ಬಾಲಿವುಡ್ ನಟಿಯರು ಹಾಗೂ ಕ್ರಿಕೆಟಿಗರ ನಡುವಿನ ಪ್ರೇಮಕಥೆ ಇಂದು ನಿನ್ನೆಯದಲ್ಲ. ಸುಮಾರು 60 ದಶಕದಿಂದಲೂ ಇಂತಹ ಅನೇಕ ಪ್ರೇಮಕಥೆಗಳು ಸಾಗುತ್ತಾ ಬಂದಿವೆ. ಶರ್ಮಿಳಾ ಠಾಗೂರ್-ಪಟೌಡಿ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಗೀತಾ ಬಸ್ರಾ-ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಜೋಡಿಗಳು ಮದುವೆಯಾಗಿ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಆದರೆ ವಿಫಲವಾದ ಬಹಳಷ್ಟು ಪ್ರೇಮಕಥೆಗಳು ಕೂಡಾ ಇವೆ.
ಇಮ್ರಾನ್ ಖಾನ್- ಜೀನತ್ ಅಮಾನ್
ಪಾಕಿಸ್ತಾನದ ಕ್ರಿಕೆಟಿಗ ಇಮ್ರಾನ್ ಖಾನ್ ಹಾಗೂ ತಮ್ಮ ಬೋಲ್ಡ್ ಲುಕ್ನಿಂದಲೇ ಹುಡುಗರ ನಿದ್ರೆ ಕದ್ದಿದ್ದ ಜೀನತ್ ಅಮಾನ್ ರಿಲೇಷನ್ಶಿಪ್ನಲ್ಲಿದ್ದಾರೆ, ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಆ ಸಮಯದಲ್ಲಿ ದೊಡ್ಡ ಸುದ್ದಿ ಆಗಿತ್ತು. ಏಕೆಂದರೆ ಈ ಸಮಯದಲ್ಲಿ ಇವರು ಕೆಲವು ದಿನಗಳ ಕಾಲ ಡೇಟಿಂಗ್ ಕೂಡಾ ಮಾಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಇವರ ನಡುವಿನ ರಿಲೇಷನ್ ಅಂತ್ಯವಾಯ್ತು. ಭಾರತ-ಪಾಕ್ತಿಸ್ತಾನ ಪ್ರೇಮಕಥೆಗೆ ಸುಖಾಂತ್ಯ ಕೂಡಿ ಬರಲಿಲ್ಲ.
ವಿವಿಯನ್ ರಿಚರ್ಡ್-ನೀನಾ ಗುಪ್ತಾ
ವಿವಿಯನ್ ರಿಚರ್ಡ್ ಪಂದ್ಯವೊಂದಕ್ಕಾಗಿ ಮುಂಬೈಗೆ ಬಂದಿದ್ದಾಗ ನೀನಾ ಗುಪ್ತಾ ಹಾಗೂ ವಿವಿಯನ್ ನಡುವೆ ಪ್ರೀತಿ ಚಿಗುರಿದೆ. ಕಾರಣಾಂತರಗಳಿಂದ ಇವರಿಬ್ಬರ ಮದುವೆ ಸಾಧ್ಯವಾಗಲಿಲ್ಲ. ಆದರೆ ನೀನಾ ಅವರ ಪುತ್ರಿ ಮಸಾಬಾ, ವಿವಿಯನ್ ಅವರಿಗೆ ಜನಿಸಿದ ಮಗು ಎನ್ನಲಾಗುತ್ತಿದೆ.