ಕರ್ನಾಟಕ

karnataka

ETV Bharat / sitara

ಅರುಣಾಚಲ ಶಾಸಕರ ಬಗ್ಗೆ ಟೀಕೆ ಮಾಡಿದ ಯೂಟ್ಯೂಬರ್​ ವಿರುದ್ಧ ವರುಣ್, ಕೃತಿ ವಾಗ್ದಾಳಿ - ಪರಸ್ ಸಿಂಗ್ ವಿವಾದಾತ್ಮಕ ವಿಡಿಯೋ

ಅರುಣಾಚಲ ಪ್ರದೇಶದ ಶಾಸಕ ನಿನಾಂಗ್​ ಎರಿಂಗ್​ ಭಾರತೀಯನಲ್ಲ ಎಂಬ ಹೇಳಿಕೆ ನೀಡಿ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಪರಸ್ ಸಿಂಗ್ ವಿರುದ್ಧ ಬಾಲಿವುಡ್ ಸೆಲೆಬ್ರೆಟಿಗಳಾದ ವರುಣ್ ಧವನ್, ರಾಜ್‌ಕುಮಾರ್​ ರಾವ್ ಮತ್ತು ಕೃತಿ ಸನೋನ್​ ಆಕ್ರೋಶ ಹೊರಹಾಕಿದ್ದಾರೆ.

kruthi
kruthi

By

Published : May 26, 2021, 8:16 PM IST

ನವದೆಹಲಿ: ಬಾಲಿವುಡ್ ಸೆಲೆಬ್ರೆಟಿಗಳಾದ ವರುಣ್ ಧವನ್, ರಾಜ್‌ಕುಮಾರ್​ ರಾವ್ ಮತ್ತು ಕೃತಿ ಸನೋನ್​ ಹಾಗೂ ಮತ್ತಿತರರು ಅರುಣಾಚಲ ಪ್ರದೇಶದ ಶಾಸಕ ನಿನಾಂಗ್ ಎರಿಂಗ್ ಬಗ್ಗೆ ಜನಾಂಗೀಯವಾಗಿ ನಿಂದಿಸಿದ ಯೂಟ್ಯೂಬರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 'ಪ್ಯಾರಾಸ್ ಅಫೀಷಿಯಲ್' ಎಂಬ ಪರಸ್ ಸಿಂಗ್ ಎಂಬಾತ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್ ಅವರನ್ನು ಭಾರತೀಯರಲ್ಲ ,ಅರುಣಾಚಲ ಪ್ರದೇಶಕ್ಕೆ ಸೇರಿದವರು, ಅರುಣಾಚಲ ಪ್ರದೇಶ ಚೀನಾದ ಒಂದು ಭಾಗ" ಎಂದು ಹೇಳಿದ್ದು, ತೀವ್ರ ಕೋಲಾಹಲವನ್ನು ಹುಟ್ಟುಹಾಕಿದೆ.

ಈ ಬಗ್ಗೆ ಬಾಲಿವುಡ್​ನ ಸಾಕಷ್ಟು ಮಂದಿ ಆಕ್ರೋಶ ಹೊರಹಾಕಿದ್ದು, ಚಿತ್ರ ನಿರ್ಮಾಪಕ ಅಮರ್ ಕೌಶಿಕ್, ಪರಸ್ ಸಿಂಗ್ ಹೇಳಿಕೆಯನ್ನು ಟೀಕಿಸಿದ ಚಿತ್ರರಂಗದ ಮೊದಲಿಗರು. "ನಿಮ್ಮ ದೇಶ ಮತ್ತು ಅದರ ಪ್ರದೇಶದ ಬಗ್ಗೆ ಅಜ್ಞಾನಿಯಾಗಿರುವುದು ಮೂರ್ಖತನ, ಆದರೆ, ಆ ಅಜ್ಞಾನವನ್ನು ಆಕ್ರಮಣಕಾರಿ ರೀತಿಯಲ್ಲಿ ವ್ಯಕ್ತಪಡಿಸಿದಾಗ ಅದು ವಿಷಕಾರಿಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಕೌಶಿಕ್ ಅವರ ಮುಂಬರುವ ಚಿತ್ರ ಭೆಡಿಯಾದಲ್ಲಿ ನಟಿಸಿರುವ ಧವನ್ ಮತ್ತು ಕೃತಿ ಸನೋನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಚಿತ್ರ ಕೌಶಿಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಜನರು ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು "ಸಮಾನ ಗೌರವದಿಂದ" ಗೌರವಿಸಲು ಪ್ರಾರಂಭಿಸುವ ಸಮಯ ಇದು ಎಂದು ಕೃತಿ ಸನೋನ್ ಹೇಳಿದ್ದಾರೆ.

ABOUT THE AUTHOR

...view details