ಮುಂಬೈ (ಮಹಾರಾಷ್ಟ್ರ):ಮುಂಬೈನಲ್ಲಿ ಮಂಗಳವಾರದಂದು ಗ್ಲೋಬಲ್ ಫೇಮ್ ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮನೋರಂಜನಾ ಉದ್ಯಮದ ಗಣ್ಯರು ತಮ್ಮ ಸೈಲಿಶ್ ಉಡುಗೆಯಲ್ಲಿ ಕಾಣಿಸಿಕೊಂಡರು.
ರಾಖಿ ಸಾವಂತ್ ಸಖತ್ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡರು. ಪ್ರಶಸ್ತಿ ಪಡೆಯಲು ಸಾಕಷ್ಟು ಉತ್ಸುಕಳಾಗಿದ್ದೇನೆ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದ ಸಮರ್ಪಿಸಿದರು. ಜೊತೆಗೆ ಮನೋರಂಜನಾ ಉದ್ಯಮದಲ್ಲಿ ಕೆಲಸ ಮಾಡಿದ್ದಕ್ಕಾಗಿ ಪ್ರಶಸ್ತಿ ಗಳಿಸುವ ಎಲ್ಲರೂ ಹೆಮ್ಮೆ ಪಡಬೇಕು ಎಂದರು. ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಎಲ್ಲರೂ ಅವರದ್ದೇ ಆದ ವಿಭಿನ್ನ ಶೈಲಿಯಲ್ಲಿ ಮನೋರಂಜಕರೇ. ಆದರೆ ನಾನು ಫೈಯರ್.. ಎಂದು ತಮ್ಮನ್ನು ಹೊಗಳಿಕೊಂಡರು. ನಾನು ಫ್ಲವರ್ ಅಲ್ಲ ಫೈಯರ್ ಎಂದು ಹಾಸ್ಯ ಚಟಾಕಿಯನ್ನೂ ಹಾರಿಸಿದರು.