ಕರ್ನಾಟಕ

karnataka

ETV Bharat / sitara

ರಿಯಾ ಚಕ್ರವರ್ತಿ ಬಂಧನ... ಬಿಗ್​ ವಿಕ್ಟರಿ ಎಂದ ನಟ ಶೇಖರ್​​ ಸುಮನ್!​ - ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ನಡೆಸುತ್ತಿದ್ದ ವೇಳೆ ರಿಯಾ ಚಕ್ರವರ್ತಿ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿರುವ ಮಾಹಿತಿ ಗೊತ್ತಾಗಿರುವ ಕಾರಣ ಇದೀಗ ಅವರನ್ನ ಎನ್​ಸಿಬಿ ವಶಕ್ಕೆ ಪಡೆದುಕೊಂಡಿದೆ.

Rhea Chakraborty's arrest
Rhea Chakraborty's arrest

By

Published : Sep 8, 2020, 5:26 PM IST

ಮುಂಬೈ:ಬಾಲಿವುಡ್​ನ ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ಹಾಗೂ ಡ್ರಗ್ಸ್​​ ಕೇಸ್​ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನಟಿ ರಿಯಾ ಚಕ್ರವರ್ತಿಯನ್ನ ಇದೀಗ ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್​​ಸಿಬಿ) ಬಂಧಿಸಿದೆ.

ಕಳೆದ ಮೂರು ದಿನಗಳಿಂದ ಸತತವಾಗಿ ವಿಚಾರಣೆಗೊಳಪಟ್ಟಿದ್ದ ನಟಿಯನ್ನ ಇಂದು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರ ಬಂಧನವಾಗುತ್ತಿದ್ದಂತೆ ನಟಿ ಶೇಖರ್​​​ ಸುಮನ್​ ಟ್ವೀಟ್​ ಮಾಡಿದ್ದು, ಇದೊಂದು ದೊಡ್ಡ ಗೆಲುವು. ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣಕ್ಕೆ ಖಂಡಿತವಾಗಿ ಇದೀಗ ಸ್ಪಷ್ಟ ದಾರಿ ಕಾಣಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸುಶಾಂತ್​ ಸಿಂಗ್ ಸಾವು ಪ್ರಕರಣ​: ನಟಿ ರಿಯಾ ಚಕ್ರವರ್ತಿ ಅರೆಸ್ಟ್​

ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಿಯಾ ಸಹೋದರ ಶೋವಿಕ್​​ ಚಕ್ರವರ್ತಿ ಹಾಗೂ ಸುಶಾಂತ್​ ಸಿಂಗ್​ ರಜಪೂತ್​ ಮ್ಯಾನೇಜರ್​​ ಸ್ಯಾಮ್ಯುಯೆಲ್​ ಮಿರಾಂಡಾ ಅವರನ್ನ ಎನ್​​ಸಿಬಿ ಬಂಧನ ಮಾಡಿದೆ.

ರಿಯಾ ಚಕ್ರವರ್ತಿ ಬಂಧನ

ABOUT THE AUTHOR

...view details