ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಬಾಲಿವುಡ್ ಸ್ಟಾರ್ಗಳಲ್ಲಿ ನಟಿ ಊರ್ವಶಿ ಸಹ ಒಬ್ಬರಾಗಿದ್ದಾರೆ. ಕೆಲ ದಿನಗಳ ಹಿಂದೆ ಬಾಕ್ಸಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋವೊಂದನ್ನು ಹಾಕಿ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದರು. ಈಗ ರೆಡ್ ಮಡ್ ಬಾತ್ (ಕೆಂಪು ಮಣ್ಣಿನ ಸ್ನಾನ) ಮಾಡುತ್ತಿರುವ ಫೋಟೋವೊಂದನ್ನು ಹಾಕಿ ಅದರ ವಿಶೇಷತೆ ಬಗ್ಗೆ ಹೇಳಿಕೊಂಡಿದ್ದಾರೆ.
ನಟಿ ಊರ್ವಶಿ ರೌತೆಲಾ ಸದ್ಯ ಬಾಲೆರಿಕ್ ಬೀಚ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತಿಚೇಗೆ ಈ ಬೀಚ್ನಲ್ಲಿರುವ ಮಡ್ ಸ್ಪಾ ಸೆಂಟರ್ಗೆ ತೆರಳಿದ್ದರು. ಅಲ್ಲಿ ರೆಡ್ ಮಡ್ ಬಾತ್ ಥೆರಪಿಗೆ ಒಳಗಾಗಿದರು. ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೆಡ್ ಮಡ್ ಬಾತ್ ಮಾಡುತ್ತಿರುವುದರ ಬಗ್ಗೆ ಫೋಟೋವೊಂದನ್ನು ಹರಿಯಬಿಟ್ಟಿದ್ದಾರೆ.