ನಿನ್ನೆ ಬಿಡುಗಡೆಯಾಗಿರುವ 'ಮಿಷನ್ ಮಂಗಲ್' ಚಿತ್ರದ ಎರಡನೇ ಟ್ರೇಲರ್ನಲ್ಲಿ ಬರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಈ ಸೀನ್ನಲ್ಲಿ ಕಾಣಿಸಿಕೊಂಡ ನಟಿ ತಾಪ್ಸಿ ಪನ್ನು ವಿರುದ್ಧ ಸಾಕಷ್ಟು ಗಂಭೀರ ಟೀಕೆಗಳು ಕೇಳಿ ಬರುತ್ತಿವೆ.
'ಮಿಷನ್ ಮಂಗಲ್' ಟ್ರೇಲರ್ ದೃಶ್ಯ ... ತಾಪ್ಸಿ ವಿರುದ್ಧ ಟೀಕೆಗಳ ಸುರಿಮಳೆ - bollywood actress tapsee
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮಿಷನ್ ಮಂಗಲ್ ಚಿತ್ರ ಇದೇ 15 ರಂದು ಬಿಡುಗಡೆಯಾಗುತ್ತಿದೆ. ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ವಿದ್ಯಾ ಬಾಲನ್ ಹಾಗೂ ಕನ್ನಡದ ದತ್ತಣ್ಣ ನಟಿಸಿರುವ ಈ ಚಿತ್ರಕ್ಕೆ ಕನ್ನಡಿಗ ಜಗನ್ ಶಕ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
2 ನಿಮಿಷ 10 ಸೆಕೆಂಡ್ಗಳ ಈ ಟ್ರೇಲರ್ನಲ್ಲಿ ತಾಪ್ಸಿ ಪನ್ನು ಕಾರು ಡ್ರೈವಿಂಗ್ ಕಲಿಯುತ್ತಿರುವ ದೃಶ್ಯ ಬರುತ್ತದೆ. ಕಾರು ಓಡಿಸುತ್ತಿದ್ದ ಈ ನಟಿ ಗೇರ್ ಬದಲಿಸುವ ವೇಳೆ ಗೊಂದಲಕ್ಕೆ ಸಿಲುಕಿ ಪಕ್ಕದಲ್ಲಿದ್ದ ತರಬೇತುದಾರನ ಪ್ರೈವೇಟ್ ಪಾರ್ಟ್ ಟಚ್ ಮಾಡ್ತಾರೆ. ಹಾಸ್ಯಕ್ಕಾಗಿ ಸೃಷ್ಟಿಸಿರುವ ಈ ದೃಶ್ಯವೀಗ ತಾಪ್ಸಿ ಪನ್ನುಗೆ ಟೀಕೆಗಳನ್ನು ತಂದು ಕೊಡುತ್ತಿದೆ.
ನೇರವಂತಿಕೆಯ ನಟಿ ತಾಪ್ಸಿ ಸ್ತ್ರೀವಾದಿ. ಲಿಂಗ ಸಮಾನತೆ ಪರ ಇರುವವರು. ಕಬೀರ್ ಸಿಂಗ್ ಚಿತ್ರದಲ್ಲಿ ನಟಿಗೆ ನಾಯಕ ಹೊಡೆಯುವ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ರೀತಿ ನಟಿಯನ್ನು ಹೊಡೆಯಬಾರದಿತ್ತು ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಿರುದ್ಧ ಮಾತಾಡಿದ್ದರು. ಇದೀಗ ಮಿಷನ್ ಮಂಗಲ್ ಚಿತ್ರದಲ್ಲಿಯ ಈ ದೃಶ್ಯ ಹಿಡಿದುಕೊಂಡ ನೆಟ್ಟಿಗರು ಪಿಂಕ್ ಹುಡುಗಿಗೆ ತರಹೇವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಸೀನ್ಲ್ಲಿ ತಾಪ್ಸಿ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಕಬೀರ್ ಸಿಂಗ್ ಚಿತ್ರದಲ್ಲಿ ನಾಯಕ ಕಬೀರ್ ಸಿಂಗ್ ನಾಯಕಿ ಪ್ರೀತಿಗೆ ಹೊಡೆದಿದ್ದು ತಪ್ಪೆಂದು ಪರಿಗಣಿಸಿದರೆ, ಈ ದೃಶ್ಯ ಕೂಡ ತಪ್ಪು ಎಂದು ಟೀಕೆ ಮಾಡಿದ್ದಾರೆ.