ಕರ್ನಾಟಕ

karnataka

ETV Bharat / sitara

ಏನು! ನನ್ನ ಮಗಳ ಮದುವೆ ಫಿಕ್ಸ್ ಆಯಿತಾ? - ಟಾಲಿವುಡ್ ಡಾರ್ಲಿಂಗ್ ಪ್ರಭಾಸ್

ತಮ್ಮ ಮಗಳು ಶ್ರದ್ಧಾ ಕಪೂರ್​ ಮದುವೆ ಕುರಿತು ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ಶಕ್ತಿ ಕಪೂರ್ ಫುಲ್ ಸ್ಟಾಪ್​ ನೀಡಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Jul 12, 2019, 10:03 AM IST

ಮುಂಬೈ :ಸಾಹೋ ಸುಂದರಿ ಶ್ರದ್ಧಾ ಕಪೂರ್​ ಮ್ಯಾರೇಜ್ ಮ್ಯಾಟರ್ ಮತ್ತೆ ಸದ್ದು ಮಾಡುತ್ತಿದೆ. ರೂಮರ್​​ ಬಾಯ್​​​​ಫ್ರೆಂಡ್ ರೋಷನ್ ಶ್ರೇಷ್ಠ ಜತೆ ಬಾಲಿವುಡ್ ಬೆಡಗಿ ಶ್ರದ್ಧಾ ಮುಂದಿನ ವರ್ಷ (2020) ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಆದರೆ, ಈ ಮದುವೆ ವದಂತಿಯನ್ನು ಶ್ರದ್ಧಾ ತಂದೆ ಶಕ್ತಿ ಕಪೂರ್ ತಳ್ಳಿ ಹಾಕಿದ್ದಾರೆ.

ಮಾಧ್ಯಮಗಳಿಗೆ ವ್ಯಂಗ್ಯವಾಗಿಯೇ ರಿಯಾಕ್ಷನ್ ಕೊಟ್ಟಿರುವ ಶಕ್ತಿ ಕಪೂರ್​, ನಿಜವಾಗಿಯೂ ನನ್ನ ಮಗಳು ಮದುವೆ ಆಗ್ತಿದ್ದಾಳೆಯೇ? ಎಂದು ಬೆರಗು ನೋಟದಿಂದ ಪ್ರಶ್ನಿಸಿರುವ ಅವರು, ಮದುವೆಗೆ ನನ್ನನ್ನೂ ಕರೆಯಲು ಮರೆಯಬೇಡಿ. ಈ ವಿವಾಹ ಎಲ್ಲಿ ನಡೆಯುತ್ತದೆ ಎಂಬುದನ್ನು ನನಗೂ ತಿಳಿಸಿ, ನಾನೂ ಬರುತ್ತೇನೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು, ಬಹುಶಃ ಮಗಳ ಮದುವೆ ಸುಳಿವು ಗೊತ್ತಿರದ ತಂದೆ ನಾನೋಬ್ಬನೆ ಇರಬಹುದು, ದಯವಿಟ್ಟು ನನಗೆ ತಿಳಿಸಿ ಎಂದಿದ್ದಾರೆ.

ಕಳೆದ ಎರಡು-ಮೂರು ತಿಂಗಳ ಹಿಂದೆಯೇ ತನ್ನ ಮಗಳ ಮದುವೆ ವದಂತಿ ತಳ್ಳಿ ಹಾಕಿದ್ದ ಶಕ್ತಿ ಕಪೂರ್​, ಈ ಸುದ್ದಿಗಳಲ್ಲಿ ಹುರುಳಿಲ್ಲ. ಶ್ರದ್ಧಾಗೆ ಇನ್ನೂ ಐದು ವರ್ಷ ಮದುವೆಯಾಗುವ ಉದ್ದೇಶ ಇಲ್ಲ. ಆಕೆಯ ಸದ್ಯಕ್ಕೆ ಸಾಕಷ್ಟು ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾಳೆ ಎಂದಿದ್ದರು. ಇದೀಗ ಮತ್ತೊಮ್ಮೆ ಗಾಳಿ ಸುದ್ದಿಗಳಿಗೆ ಅಪಹಾಸ್ಯದ ಮೂಲಕ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ಇನ್ನು ಸದ್ಯ ಶ್ರದ್ಧಾ ಸಾಹೋ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟನೆಯ ಈ ಬಹುಭಾಷಾ ಚಿತ್ರ ಆಗಸ್ಟ್​ 15 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಮೊನ್ನೆಯಷ್ಟೆ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುತ್ತಿದೆ.

ABOUT THE AUTHOR

...view details