ಕರ್ನಾಟಕ

karnataka

ETV Bharat / sitara

ಬಹುಕಾಲದ ಗೆಳೆಯ ರೋಹನ್​​ ಶ್ರೇಷ್ಠ ಜೊತೆ ಬ್ರೇಕಪ್ ಮಾಡಿಕೊಂಡ್ರಾ ಶ್ರದ್ಧಾ? - ಬಾಲಿವುಡ್​ ನಟಿ ಶ್ರದ್ಧಾ ಕಪೂರ್ ಬ್ರೇಕಪ್​​

ಬಾಲಿವುಡ್​ ನಟಿ ಶ್ರದ್ಧಾ ಕಪೂರ್ ಕಳೆದ ನಾಲ್ಕು ವರ್ಷಗಳಿಂದ ಸೆಲೆಬ್ರೆಟಿ ಫೋಟೋಗ್ರಾಫರ್​​ ರೋಹನ್​​ ಶ್ರೇಷ್ಠ ಜೊತೆ ಡೇಟಿಂಗ್​ನಲ್ಲಿದ್ದರು. ಆದರೆ ಇದೀಗ ಈ ಜೋಡಿ ಬ್ರೇಕಪ್​ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

Shraddha Kapoor breakup with boyfriend Rohan Shrestha
ಶ್ರದ್ಧಾ ಕಪೂರ್ ಮತ್ತು ರೋಹನ್​​ ಶ್ರೇಷ್ಠ ಬ್ರೇಕಪ್​​

By

Published : Mar 26, 2022, 7:32 AM IST

ಮುಂಬೈ: ಬಾಲಿವುಡ್​ ನಟಿ ಶ್ರದ್ಧಾ ಕಪೂರ್​, ಸೆಲೆಬ್ರೆಟಿ ಫೋಟೋಗ್ರಾಫರ್​​ ರೋಹನ್​​ ಶ್ರೇಷ್ಠ ಜೊತೆ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​​ನಲ್ಲಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ,ಇದೀಗ ಇಬ್ಬರು ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ.

ಶ್ರದ್ಧಾ ಕಪೂರ್ ಮತ್ತು ರೋಹನ್​​ ಶ್ರೇಷ್ಠ ಬ್ರೇಕಪ್​​

ಹಿರಿಯ ನಟ ಶಕ್ತಿ ಕಪೂರ್​ ಪುತ್ರಿ ಶ್ರದ್ಧಾ ಬಾಲಿವುಡ್​ನಲ್ಲಿ ತಮ್ಮದೇ ಜನಪ್ರೀಯತೆ ಹೊಂದಿದ್ದು, ತಮ್ಮ ವೈಯಕ್ತಿಕ ಜೀವನವನ್ನು ಅಭಿಮಾನಿಗಳ ಕಣ್ಣಿನಿಂದ ಕಾಪಾಡಿಕೊಂಡು ಬಂದಿದ್ದರು. ಆದರೆ, ಶ್ರದ್ಧಾ ಬಾಲ್ಯದ ಸ್ನೇಹಿತ ರೋಹನ್​ ಜೊತೆ ಡೇಟಿಂಗ್​ನಲ್ಲಿದ್ದ ವಿಷಯ ಗುಟ್ಟಾಗಿ ಇರಲಿಲ್ಲ. ಈ ವಿಚಾರವಾಗಿ ಎಲ್ಲಿಯೂ ನಟಿ ಹೇಳಿಕೊಂಡಿಲ್ಲವಾದರೂ ಶ್ರದ್ಧಾ ಆಪ್ತರಿಗೆ ಈ ವಿಷಯ ತಿಳಿದಿತ್ತು.

ಆದರೆ, ಪಿಂಕ್​ವಿಲ್ಲಾ ವರದಿ ಪ್ರಕಾರ, ಗೋವಾದಲ್ಲಿ ನಡೆದ ಶ್ರದ್ಧಾ ಹುಟ್ಟುಹಬ್ಬಕ್ಕೂ ರೋಹನ್ ಹೋಗಿಲ್ಲ. ಅವರಿಬ್ಬರೂ ಕೆಲ ಸಮಯದ ಹಿಂದೆ ಬೇರೆ ಬೇರೆಯಾಗಿದ್ದಾರೆ ಎಂದಿದೆ. ಆದರೆ, ಬ್ರೇಕಪ್ ವಿಚಾರವಾಗಿ ಶ್ರದ್ಧಾ ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಆ ಬಗ್ಗೆ ಸ್ಪಷ್ಟನೆಯನ್ನೂ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಶ್ರದ್ಧಾ ಬಗ್ಗೆ ಯೋಚಿಸುವಂತಾಗಿದೆ.

ಇತ್ತ ಕೆಲಸದ ವಿಚಾರವಾಗಿ ನೋಡುವುದಾದರೆ ನಟ ರಣಬೀರ್ ಕಪೂರ್ ಜೊತೆಗೆ ಲವ್ ರಂಜನ್ ಅವರ ಇನ್ನೂ ಹೆಸರಿಸದ ಚಿತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಪಂಕಜ್ ಪರಾಶರ್ ಅವರ 'ಚಾಲ್ಬಾಜ್ ಇನ್ ಲಂಡನ್' ಮತ್ತು ವಿಶಾಲ್ ಫುರಿಯಾ ಅವರ 'ನಾಗಿನ್' ಚಿತ್ರಗಳಲ್ಲಿ ಬ್ಯಸಿಯಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಾ.27ಕ್ಕೆ KGF-2 ಚಿತ್ರದ ಟ್ರೈಲರ್ ಬಿಡುಗಡೆ ಮಾಡ್ತಾರೆ ಕರುನಾಡ ಚಕ್ರವರ್ತಿ-ಕರಣ್ ಜೋಹರ್!


ABOUT THE AUTHOR

...view details