ಬಾಲಿವುಡ್ ನಟಿ ರವೀನಾ ಟಂಡನ್ 1999 ರಲ್ಲಿ ಬಿಡುಗಡೆಯಾದ 'ಉಪೇಂದ್ರ' ಚಿತ್ರದಲ್ಲಿ ರಿಯಲ್ ಸ್ಟಾರ್ ಜೊತೆ ನಟಿಸಿ ಕನ್ನಡಿಗರ ಮನಸ್ಸಿಗೆ ಬಹಳ ಹತ್ತಿರವಾಗಿದ್ದರು. ತಮ್ಮ ಮಕ್ಕಳೊಂದಿಗೆ ಬೇರೆ ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು ಅವರ ಜವಾಬ್ದಾರಿ ಹೊರುವ ಮೂಲಕ ಸಮಾಜಸೇವೆಯಲ್ಲೂ ಅವರು ಮುಂದಿದ್ದಾರೆ.
ರವೀನಾ ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಬಹಳ ಆ್ಯಕ್ಟಿವ್ ಇದ್ದಾರೆ. ಇದುವರೆಗೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. 2002 ರಲ್ಲಿ ದತ್ತು ಪಡೆದ ಪೂಜಾ ಹಾಗೂ ಛಾಯಾ ಎಂಬ ಹೆಣ್ಣುಮಕ್ಕಳಿಗೆ ಒಳ್ಳೆಯ ಕಡೆ ವರ ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನು ಎತ್ತಿ ಆಡಿಸುತ್ತಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರವೀನಾ ಷೇರ್ ಮಾಡಿಕೊಂಡಿದ್ದರು. ಈಗ ವಿಶ್ವದ ಅತಿ ದೊಡ್ಡ ಮಹಿಳಾ ಸಂಸ್ಥೆಯೊಂದರ ಜೊತೆಗೆ ಸೇರಿಕೊಂಡು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಹೆಚ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆದ 9 ವಿಶೇಷ ಚೇತನ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುತ್ತಿದ್ದಾರೆ.