ಬಾಲಿವುಡ್ ನಟಿ ರಾಖಿ ಸಾವಂತ್ ಕಾಂಟ್ರವರ್ಸಿಗಳನ್ನು ತಮ್ಮ ಮಡಿಲಿನಲ್ಲೇ ಕಟ್ಟಿಕೊಂಡು ತಿರುಗುತ್ತಿರುತ್ತಾರೆ. ತಲೆಬುಡವಿಲ್ಲದ ಕಾಮೆಂಟ್ಸ್ ಮಾಡ್ತಾ ಸದಾ ವಿವಾದಗಳ ಕೇಂದ್ರ ಬಿಂದು ಆಗಿರುತ್ತಾಳೆ. ಕಾಲುಕೆದರಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಈ ಹುಡುಗಿಯ ಕಣ್ಣು ಈಗ ಕ್ರಿಕೆಟಿಗರಾದ ವಿರಾಟ್ ಕೋಹ್ಲಿ ಹಾಗೂ ರೋಹಿತ್ ಶರ್ಮಾ ಮೇಲೆ ಬಿದ್ದಿದೆ.
ಸೆಮಿ ಫೈನಲ್ ಸೋಲಿಗೆ ಕೋಹ್ಲಿ- ರೋಹಿತ್ ಪತ್ನಿಯರೇ ಕಾರಣ : ಬಾಲಿವುಡ್ ನಟಿ ಟೀಕೆ - ಕ್ರಿಕೆಟ್ ವಿಶ್ವಕಪ್ 2019
ಕಾಂಟ್ರವರ್ಸಿ ನಟಿ ರಾಖಿ ಸಾವಂತ್ ಭಾರತ ಕ್ರಿಕೆಟ್ ತಂಡದ ವಿರುದ್ಧ ಟೀಕೆ ಮಾಡಿ, ಮುಖಭಂಗ ಅನುಭವಿಸಿದ್ದಾರೆ.
ಕ್ರಿಕೆಟ್ ವಿಶ್ವಕಪ್ 2019 ಸೆಮಿಫೈನಲ್ಲ್ಲಿ ಭಾರತ ತಂಡ ಸೋಲಿಗೆ ಕಾರಣ ಏನು ಎಂಬುದನ್ನು ರಾಖಿ ಹೇಳಿದ್ದಾರೆ. ಮ್ಯಾಚ್ ಕೈಚೆಲ್ಲಿ ವಿಶ್ವಕಪ್ ರೇಸ್ನಿಂದ ಹೊರಬಿದ್ದ ಭಾರತ ತಂಡದ ಮೇಲೆ ಹರಿ ಹಾಯ್ದಿದ್ದಾರೆ. ಇವರ ಪ್ರಕಾರ ನಾಯಕ ವಿರಾಟ್ ಕೋಹ್ಲಿ ಹಾಗೂ ಹಿಟ್ಮ್ಯಾನ್ ರೋಹಿತ್ ಶರ್ಮಾ ತಮ್ಮ ಪತ್ನಿಯರನ್ನು ಕರೆತಂದಿದ್ದೇ ಈ ಪಂದ್ಯ ಸೋಲಿಗೆ ಕಾರಣವಂತೆ. ಕೋಹ್ಲಿ ಹೆಂಡತಿ ಅನುಷ್ಕಾ ಶರ್ಮಾ ಹಾಗೂ ರೋಹಿತ್ ವೈಫ್ ರಿತಿಕಾ ಶರ್ಮಾ ಇಂಗ್ಲೆಂಡ್ಗೆ ಬಂದಿದ್ದರು. ಇದರಿಂದ ವರ್ಲ್ಡ್ ಕಪ್ ಮೇಲಿನ ಇವರ ಪತಿಯರ ಗಮನ ಕಡಿಮೆ ಆಯಿತು ಎಂದಿದ್ದಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಾಂಟ್ರವರ್ಸಿ ಕ್ವೀನ್, ಈ ಆಟಗಾರರು ವರ್ಲ್ಡ್ ಕಪ್ನ್ನು ತಮ್ಮ ಹನಿಮೂನ್ ಕಪ್ ಆಗಿ ಪರಿವರ್ತಿಸಿದ್ದರು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ರಾಖಿಯವರ ಈ ಟೀಕೆ ಅವರಿಗೆನೇ ಮುಳ್ಳಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈಕೆಯ ವಿರುದ್ಧ ಮರು-ಟೀಕೆಗಳ ಸುರಿಮಳೆಯಾಗಿದೆ. ಮೊದಲು ನೀವು ಬಾಲಿವುಡ್ಲ್ಲಿ ನೆಲೆಯೂರುವುದರತ್ತ ಗಮನ ಹರಿಸಿ ಎಂದು ಬುದ್ಧಿ ಮಾತು ಹೇಳಿದ್ದಾರೆ ನೆಟ್ಟಿಜನ್ಸ್.