ಬಾಲಿವುಡ್ ಗಲ್ಲಿಯ ಈ ವರ್ಷದ ಬಹುನಿರೀಕ್ಷಿತ ಚಿತ್ರ ಅಂತಲೇ ಸುದ್ದಿಯಾಗುತ್ತಿರುವ ‘ಸತ್ಯಮೇವ ಜಯತೆ-2’ ಸಿನಿಮಾ ಈಗಾಗಲೇ ಟ್ರೈಲರ್ ಬಿಡುಗಡೆ ಮಾಡಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಬರಪೂರ ಆ್ಯಕ್ಷನ್ ಸೀನ್ಗಳು ತುಂಬಿರುವುದು ಜಾನ್ ಅಬ್ರಹಾಂ (John Abraham) ಲುಕ್ನಿಂದಲೇ ತಿಳಿದು ಬರ್ತಿದೆ.
ಇದೀಗ ಚಿತ್ರದ ‘ಕುಸು ಕುಸು’ (Kusu Kusu song) ಹಾಡಿನ ಪ್ರೋಮೋ ವಿಡಿಯೋವನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡಿನಲ್ಲಿ ಬಾಲಿವುಡ್ ಬೆಡಗಿ ನೋರಾ ಫತೇಹಿ (Nora Fatehi) ಕಾಣಿಸಿಕೊಂಡಿದ್ದು, ಜಾಲತಾಣದಲ್ಲಿ ಹಾಡು ಹಲ್ಚಲ್ ಎಬ್ಬಿಸಿದೆ. ಈ ಮೊದಲು ‘ಸತ್ಯಮೇವ ಜಯತೆ’ (Satyameva Jayate) ಚಿತ್ರದಲ್ಲಿ ‘ದಿಲ್ಬರ್’ ಆಗಿ ಕಾಣಿಸಿಕೊಂಡಿದ್ದ ನೋರಾ, ಆ ಚಿತ್ರದ ಮುಂದುವರಿದ ಭಾಗವಾದ ಪಾರ್ಟ್ 2ನಲ್ಲಿ ‘ದಿಲ್ರೂಬಾ’ ಆಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕುಸು ಕುಸು ಪ್ರೋಮೋ ಸಾಂಗ್ನಲ್ಲಿ ಬೆಲ್ಲಿ ಡ್ಯಾನ್ಸ್ನಲ್ಲಿ ಮಿಂಚಿದ್ದಾರೆ.