ಕರ್ನಾಟಕ

karnataka

ETV Bharat / sitara

ಆರು ತಿಂಗಳು ಬಾಲಿವುಡ್​​ನ ಈ ನಟಿಗೆ ಜೈಲುವಾಸ: ಕಾರಣ? - ಬಾಲಿವುಡ್ ನಟಿ

ನಟಿ ಕೊಯೆನಾ ಮಿತ್ರಾ ವಿರುದ್ಧ ಕೇಳಿ ಬಂದಿದ್ದ ಚೆಕ್​ ಬೌನ್ಸ್ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Jul 22, 2019, 1:32 PM IST

ಮಾಡೆಲ್ ಕಂ ನಟಿ ಕೊಯೆನಾ ಮಿತ್ರಾ ಅವರಿಗೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಡಿ ಈ ಬಾಲಿವುಡ್​ ಬ್ಯೂಟಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

2013 ರಲ್ಲಿ ಮಾಡೆಲ್ ಪೂನಂ ಸೇತಿ ಬಳಿ ಪಡೆದಿದ್ದ 22 ಲಕ್ಷ ಸಾಲ ಮರುಪಾವತಿಗೆ ಇವರು ನೀಡಿದ್ದ ₹3 ಲಕ್ಷ ಮೌಲ್ಯದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆ ನಟಿಯ ವಿರುದ್ಧ ಜುಲೈ 19 2013 ರಂದು ಪೂನಂ ನೋಟಿಸ್ ನೀಡಿದ್ದರು. ಆದರೆ, ಇವರ ವಿರುದ್ಧವೇ ಕೊಯೆನಾ ಮರುನೋಟಿಸ್ ಕಳುಹಿಸಿದ್ದರು. ನಂತರ ಅಕ್ಟೋಬರ್ 10, 2013 ರಲ್ಲಿ ಕೊಯೆನಾ ಮಿತ್ರಾ ವಿರುದ್ಧ ಮೆಟ್ರೋಪಾಲಿಟಿನ್ ನ್ಯಾಯಾಲಯದಲ್ಲಿ ಪೂನಂ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್​ ಇಂದು ತೀರ್ಪು ಪ್ರಕಟಿಸಿದೆ. ಆರೋಪಿ ಕೊಯೆನಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ, ₹1.64 ಲಕ್ಷ ಬಡ್ಡಿ ಸೇರಿ ₹4.64 ಹಣ ವಾಪಸ್ ನೀಡುವಂತೆ ಕೂಡ ಆದೇಶ ಹೊರಡಿಸಿದೆ.

ABOUT THE AUTHOR

...view details