ಬಾಲಿವುಡ್ ನಟಿ ಇಶಾ ಗುಪ್ತಾ ಸ್ವಾತಂತ್ರ್ಯೋತ್ಸವದಂದು ಯಡವಟ್ಟು ಮಾಡಿಕೊಂಡಿದ್ದಾರೆ. ಪರಿಣಾಮ ನೆಟ್ಟಿಗರಿಂದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದ ಬಗ್ಗೆ ಪಾಠ ಮಾಡಿಸಿಕೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವದಂದೇ ನಟಿ ಇಶಾ ಯಡವಟ್ಟು! - ಬಾಲಿವುಡ್ ನಟಿ ಇಶಾ ಗುಪ್ತಾ
ಹಾಟ್ ಹುಡುಗಿ ಇಶಾ ಟ್ವೀಟ್ ಮಾಡಿ ತನ್ನ ಅಭಿಮಾನಿಗಳಿಗೆ ಹಾಗೂ ದೇಶದ ಜನತೆಗೆ ಸ್ವಾತoತ್ರ್ಯ ದಿನದ ಶುಭಾಶಯಗಳನ್ನು ಹೇಳಿದ್ದರು. ಆದರೆ, ಒಂದು ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗಿದ್ದರು.
ಆಗಸ್ಟ್ 15 ರಂದು ಇಡೀ ಭಾರತ ದೇಶವೇ 73ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿತ್ತು. ಶುಭಾಶಯಗಳ ಸಂದೇಶಗಳು ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲರೂ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದರು. ಇದೆ ವೇಳೆ, ಹಾಟ್ ಹುಡುಗಿ ಇಶಾ ಕೂಡ ಟ್ವೀಟ್ ಮಾಡಿ ತನ್ನ ಅಭಿಮಾನಿಗಳಿಗೆ ಹಾಗೂ ದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹೇಳಿದ್ದರು. ಆದರೆ, ಒಂದು ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗಿದ್ದರು.
ಬಾಲಿವುಡ್ ಬೊಂಬೆ ಇಶಾ ಸ್ವಾತಂತ್ರ್ಯ ದಿನದ ಬದಲು ಗಣರಾಜ್ಯೋತ್ಸವದ ಶುಭಾಶಯ ಎಂದು ಬರೆದುಕೊಂಡಿದ್ದರು. ಇದನ್ನು ನೋಡುತ್ತಲೇ ಕೆರಳಿದ ನೆಟ್ಟಿಗರು, 'ಮೇಡಂ ಇಂದು ಗಣರಾಜ್ಯೋತ್ಸವ ಅಲ್ಲ, ಸ್ವಾತಂತ್ರ್ಯೋತ್ಸವ ದಿನ' ಎಂದು ಮನವರಿಕೆ ಮಾಡಿದ್ದಾರೆ. ಕೂಡಲೇ ತಮ್ಮ ಟ್ವೀಟ್ ಡಿಲೀಟ್ ಮಾಡಿದ ಇಶಾ, ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ ಎಂದು ಸಮಜಾಯಿಸಿ ನೀಡಿದ್ರು. ಮತ್ತೆ ಕೆಲ ಹೊತ್ತಿನ ನಂತರ ನನ್ನ ಟ್ವಿಟ್ಟರ್ ಸರಿಹೋಗಿದೆ ಎಂದು ಹೇಳಿ, ಸ್ವಾತಂತ್ರ್ಯ ದಿನದ ಶುಭ ಕೋರಿದ್ದರು. ಜತೆಗೆ ಎಲ್ಲ ಟ್ರೋಲರ್ಗಳಿಗೆ ಮಾರ್ಮಿಕವಾಗಿ ಕೈ ಮುಗಿದಿದ್ದಾರೆ.