ಕರ್ನಾಟಕ

karnataka

ETV Bharat / sitara

ನಿರ್ಮಾಪಕನಿಗೆ 2.5 ಕೋಟಿ ರೂ. ಪಂಗನಾಮ...ಸಂಕಷ್ಟದಲ್ಲಿ ನಟಿ ಅಮಿಷಾ ಪಟೇಲ್ - ಬಾಲಿವುಡ್ ನಟಿ

ಅಮಿಷಾ ಪಟೇಲ್ 'ಕ​ಹೋನಾ ಪ್ಯಾರ್​ ಹೈ 'ಚಿತ್ರದಲ್ಲಿ ನಟಿಸಿದ್ದರು. ಈ ಹಿಂದೆಯೂ ಈಕೆ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಇದೀಗ ಕಾನೂನು ಕಂಟಕ ಎದುರಾಗಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Mar 29, 2019, 2:04 PM IST

ರಾಂಚಿ : ಬಾಲಿವುಡ್ ನಟಿ ಅಮಿಷಾ ಪಟೇಲ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ನಿರ್ಮಾಪಕನೋರ್ವನಿಗೆ 2.5 ಕೋಟಿ ರೂ. ಪಂಗನಾಮ ಹಾಕಿರುವ ಆರೋಪದಲ್ಲಿಈ ನಟಿ ವಿರುದ್ಧ ದೂರು ದಾಖಲಾಗಿದೆ.

ಇನ್ನೂ ಬಿಡುಗಡೆಯಾಗದ 'ದೇಸಿ ಮ್ಯಾಜಿಕ್' ಚಿತ್ರಕ್ಕೆ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರಿಂದ ಹಣ ಹೂಡಿಸಲಾಗಿತ್ತಂತೆ. ರಾಂಚಿಯಲ್ಲಿ ಅಮಿಷಾ ತನ್ನ ಬ್ಯುಸಿನೆಸ್ ಪಾರ್ಟನರ್​ ಕುನಾಲ್​ ಗೂಮರ್​ ಜತೆ ಅಜಯ್ ಅವರನ್ನು ಭೇಟಿ ಮಾಡಿದ್ದರಂತೆ. ಹಣಕಾಸಿನ ಕೊರತೆ ಹಿನ್ನೆಲೆ ದೇಸಿ ಮ್ಯಾಜಿಕ್ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದು, ನೀವು ಫೈನಾನ್ಸ್ ಮಾಡಿ. 2018 ಜೂನ್​ಗೆ ಚಿತ್ರ ರಿಲೀಸ್ ಆಗುತ್ತೆ. ನಿಮಗೆ ಹಣ ವಾಪಸ್​ ಮಾಡುತ್ತೇವೆ ಎಂದಿದ್ದರಂತೆ. ಇವರ ಮಾತಿನಂತೆ ಅಜಯ್ 2.5 ಕೋಟಿ ರೂ. ಕೊಟ್ಟಿದ್ದಾರೆ. ಆದರೆ, ಸಿನಿಮಾ ಇನ್ನೂ ತೆರೆಗೆ ಬಂದಿಲ್ಲ. ಇತ್ತ ಅಜಯ್ ಸಿಂಗ್ ಅವರ ಹಣ ಕೂಡ ವಾಪಸ್ ಆಗಿಲ್ಲ.

ಇದರಿಂದ ಕಂಗಾಲಾದ ಅಜಯ್​, ಅಮಿಷಾಗೆ ಕಾಲ್ ಮಾಡಿ ವಿಚಾರಿಸಿದ್ದಾನೆ. ಒಂದೆರಡು ತಿಂಗಳು ಕಾಲಾವಕಾಶ ಕೇಳಿದ ಅವರು, ಅಸಲು ಬಡ್ಡಿ ಸೇರಿ 3 ಕೋಟಿ ರೂ.ಚೆಕ್ ಅಜಯ್ ಕೈಗೆ ಇಟ್ಟಿದ್ದರಂತೆ. ಆದರೆ, ಆ ಚೆಕ್ ಕೂಡ ಬೌನ್ಸ್ ಆಗಿದೆ. ಕೊನೆಗೆ ದಾರಿ ತೋಚದಂತಾದ ಅಜಯ್​, ಸದ್ಯ ರಾಂಚಿ ಕೋರ್ಟ್​ನಲ್ಲಿ ದೂರು ನೀಡಿದ್ದಾನೆ.

ABOUT THE AUTHOR

...view details