ದೊಡ್ಮನೆ ಮಗ ಹಾಗೂ ಅಭಿಮಾನಿಗಳ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಐದು ತಿಂಗಳು ಆಯ್ತು. ಆದರೆ, ಈ ಯುವರತ್ನನನ್ನು ನೋಡಲು ಇಂದಿಗೂ ಭಾರತೀಯ ಚಿತ್ರರಂಗದ ಸ್ಟಾರ್ಗಳು ಬರ್ತಾನೆ ಇದ್ದಾರೆ. ಪವರ್ ಸ್ಟಾರ್ ಅಗಲಿಕೆ ಬಳಿಕ, ಸೌತ್ನ ಸ್ಟಾರ್ ಗಳಾದ ಕಮಲ್ ಹಾಸನ್, ಸೂರ್ಯ, ರಾಮ್ ಚರಣ್ ತೇಜಾ, ಅಲ್ಲು ಅರ್ಜುನ್, ನಿರ್ದೇಶಕ ಎಸ್.ಎಸ್. ರಾಜಮೌಳಿ ಸೇರಿದಂತೆ ಸಾಕಷ್ಟು ತಾರೆಯರು, ಸದಾಶಿವನಗರದಲ್ಲಿನ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್‌ನ ಸಂಜಯ್ ದತ್ ಸಹ ಭೇಟಿ ನೀಡಿದ್ದಾರೆ.
ಸದಾಶಿವನಗರದ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಅಪ್ಪು ಫೋಟೋಗೆ ನಮಿಸಿದ್ದಾರೆ. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್, ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಅವರು ಸಂಜಯ್ ದತ್ ಅವ್ರನ್ನ ಬರಮಾಡಿಕೊಂಡರು. ಸುಮಾರು ಒಂದು ಗಂಟೆಗಳ ಕಾಲ ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ನಟ ಸಂಜಯ್ ದತ್ ಇದ್ದರು.