ಕರ್ನಾಟಕ

karnataka

ETV Bharat / sitara

ಒಟಿಟಿಗೆ ಎಂಟ್ರಿ ಕೊಟ್ಟ ಬಾಲಿವುಡ್​ ಬಾದ್​ಶಾ: ಶೀಘ್ರದಲ್ಲೇ ಅದ್ಭುತ ನಡೆಯುತ್ತೆ ಎಂದ ಶಾರುಖ್ - ಹೊಸ ಒಟಿಟಿ ಆರಂಭಸಿದ ಶಾರುಖ್​ ಖಾನ್

ಬಾಲಿವುಡ್​ ನಟ ಶಾರುಖ್ ಒಟಿಟಿಗೆ ಪದಾರ್ಪಣೆ ಮಾಡಿದ್ದು, ಎಸ್​ಆರ್​ಕೆ+ ಎಂಬ ಒಟಿಟಿ ಆರಂಭಿಸಿದ್ದಾರೆ. ಈ ಕುರಿತಂತೆ ಟ್ವಟರ್​​​​​ನಲ್ಲಿ ಲೋಗೊ ಹಾಕಿ ಮಾಹಿತಿ ನೀಡಿದ್ದಾರೆ.

Actor shah rukh khan announces his new ott platform
ಸ್ವಂತ ಒಟಿಟಿ ಘೋಷಿಸಿದ ನಟ ಶಾರುಖ್​ ಖಾನ್

By

Published : Mar 16, 2022, 9:31 AM IST

ಕೊರೊನಾ ಕಾಣಿಸಿಕೊಂಡ ಬಳಿಕ ಜನರು ಹೆಚ್ಚಾಗಿ ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಒಟಿಟಿ ಪ್ಲಾಟ್​ಫಾರ್ಮ್​ಗಳ ಮಧ್ಯೆ ದೊಡ್ಡ ಮಟ್ಟದ ಕಾಂಪಿಟೇಷನ್​ ನಡೆಯುತ್ತಿದೆ. ನೆಟ್​​ಫ್ಲಿಕ್ಸ್​, ಅಮೆಜಾನ್​ ಪ್ರೈಮ್​ ವಿಡಿಯೋ, ಡಿಸ್ನಿ+ ಹಾಟ್​ಸ್ಟಾರ್​ ನಡುವೆ ದೊಡ್ಡ ಮಟ್ಟದ ಪೈಪೋಟಿ​ ಇದೆ. ಈಗ ಶಾರುಖ್​ ಖಾನ್​ ಕೂಡ ಇದೇ ಉದ್ಯಮದತ್ತ ಮುಖ ಮಾಡಿದ್ದಾರೆ.

ಸ್ವಂತ ಒಟಿಟಿ ಘೋಷಿಸಿದ ನಟ ಶಾರುಖ್​ ಖಾನ್

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ಬಹುಬೇಡಿಕೆ ನಟರಲ್ಲಿ ಒಬ್ಬರು. ಅನೇಕ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿದ್ದಾರೆ. ಇದರ ಜೊತೆಗೆ ನಿರ್ಮಾಣದಲ್ಲೂ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ. ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್​​ ಸ್ಟುಡಿಯೋಸ್​ ಅಡಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಒಟಿಟಿ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಎಸ್​ಆರ್​ಕೆ+ (SRK+) ಹೆಸರಿನ ಒಟಿಟಿ ಪ್ಲಾಟ್​ಫಾರ್ಮ್​ ಲಾಂಚ್ ಮಾಡೋಕೆ ಶಾರುಖ್​ ರೆಡಿ ಆಗಿದ್ದಾರೆ.

ಟ್ವಿಟರ್​ನಲ್ಲಿ ಎಸ್​ಆರ್​ಕೆ+ ಲೋಗೋವನ್ನು ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದಾರೆ. ಒಟಿಟಿ ಜಗತ್ತಿನಲ್ಲಿ ಏನೇನೋ ಆಗಲಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಕಮೆಂಟ್​ ಬಾಕ್ಸ್​ನಲ್ಲಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಈ ವಿಚಾರ ಕೇಳಿ ಕರಣ್​ ಜೋಹರ್​ ಸಖತ್​ ಎಗ್ಸೈಟ್​ ಆಗಿದ್ದಾರೆ.

ಡಿಸ್ನಿ+ ಹಾಟ್​ಸ್ಟಾರ್​ ಈಗಾಗಲೇ ದೊಡ್ಡ ಮಟ್ಟದ ಹೆಸರು ಮಾಡಿದೆ. ಈ ಒಟಿಟಿ ಜೊತೆ ಎಸ್​ಆರ್​ಕೆ+ ಕೊಲಾಬರೇಷನ್​ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಶಾರುಖ್​ ಖಾನ್​ ಈ ಬಗ್ಗೆ ಶೀಘ್ರವೇ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸದ್ಯ ಶಾರುಖ್​ ಪಠಾಣ್​ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದು, ಆಕ್ಷನ್ ಥ್ರಿಲ್ಲರ್ ಮಾದರಿಯ ಚಿತ್ರಲ್ಲಿ ಸ್ಟೈಲಿಶ್​​​​ ಆಗಿ ಕಾಣಿಸಿಕೊಂಡಿದ್ದಾರೆ. 2023ರ ಜನವರಿ 25ರಂದು ಪಠಾಣ್ ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: 'ದಿ ಕಾಶ್ಮೀರ್​ ಫೈಲ್ಸ್​​' ಚಿತ್ರದಿಂದ ಬಾಲಿವುಡ್ ಮಾಡಿದ ಎಲ್ಲ ಪಾಪ ಕಳೆದಿದೆ: ಕಂಗನಾ ರಣಾವತ್​


ABOUT THE AUTHOR

...view details