ಮುಂಬೈ :ವಿಶಿಷ್ಟ ಮ್ಯಾನರಿಸಂ, ಚಿತ್ರ-ವಿಚಿತ್ರ ವರ್ತನೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಯೋಗದ ಬಗ್ಗೆ ಮಾತಾಡಿದ್ದಾರೆ.
ರಾಖಿಗೆ 'ಯೋಗ'ದಿಂದ ಸಿಕ್ಕ ಲಾಭ ಏನು? ಉತ್ತರ ಕೇಳಿದ್ರ ನೀವು ಥ್ರಿಲ್ ಆಗ್ತೀರಾ
'ವಿಶ್ವ ಯೋಗ ದಿನ'ವಾದ ಜೂನ್ 21 ರಂದು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಾಲಿವುಡ್ ತಾರೆಯರು,ಯೋಧರು ಸೇರಿದಂತೆ ಎಲ್ಲರೂ ಯೋಗಾಸನ ಮಾಡಿ, ಅದರ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಿದರು.ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ ಯೋಗಾಸನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನವಾದ ನಿನ್ನೆ(ಜೂನ್21) ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಿತ್ಯ ಯೋಗ ಮಾಡುವುದರಿಂದಾಗುವ ಲಾಭದ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತನಗೆ ನಿತ್ಯವು ಯೋಗ ದಿನ ಎಂದು ಹೇಳಿಕೊಂಡಿರುವ ರಾಖಿ, ಕಳೆದ 8-9 ವರ್ಷಗಳಿಂದ ಪ್ರತೀ ದಿನ ತಪ್ಪದೇ ಯೋಗಾಸನ ಮಾಡುತ್ತ ಬಂದಿದ್ದಾರೆ. ಯೋಗದಿಂದ ನಾನು ಪುನರ್ಯೌವನಗೊಂಡಿದ್ದೇನೆ. ಯೋಗಾಸನದಿಂದ ನನ್ನ ಲೈಂಗಿಕ ಶಕ್ತಿಯೂ ವೃದ್ಧಿಸಿದೆ ಎಂದಿದ್ದಾರೆ.
ದೇಶದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಯೋಗವನ್ನು ಪರಿಚಯಿಸಬೇಕು. ಚಿಕ್ಕವರಿಂದ ಹಿಡಿದು ವೃದ್ದರೂ ಕೂಡ ತಪ್ಪದೇ ಯೋಗ ಮಾಡಲೇಬೇಕು ಎಂದಿರುವ ಸಾವಂತ್, ನಾನು ಫಿಟ್ ಆಗಿರಲು ಯೋಗಾಸನ ಮಾಡುತ್ತೇನೆ. ಆದರೆ, ಎಲ್ಲರೂ ನನ್ನನ್ನು ತಪ್ಪಾಗಿ ಭಾವಿಸಿದ್ದಾರೆ ಎಂದು ಉತ್ತರಿಸಿದ್ದಾರೆ.