ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟಿ ಕಾಜೋಲ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವೇಳೆ ಮಗಳನ್ನ ಮಿಸ್ ಮಾಡಿಕೊಳ್ಳುವುದಾಗಿ ನಟಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಕಾಜೋಲ್ ಮಗಳ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. "ನನ್ನ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ನನ್ನ 'ರುಡಾಲ್ಫ್ ಮೂಗ'ನ್ನು (ಕೆಂಪು ಮೂಗು) ಯಾರಿಗೂ ತೋರಿಸಲು ಬಯಸುವುದಿಲ್ಲ. ಆದ್ದರಿಂದ ನಾವು ವಿಶ್ವದ ಅತ್ಯಂತ ಮಧುರವಾದ ನಗುವಿಗೆ ಅಂಟಿಕೊಳ್ಳೋಣ. ಮಿಸ್ ಯೂ ನೈಸಾ ದೇವಗನ್" ಎಂದು ಬರೆದುಕೊಂಡಿದ್ದಾರೆ.