ಓದಲೆಂದು ಅಮೆರಿಕದಲ್ಲಿ ನೆಲೆಸಿರುವ ಇರಾ, ನಿರ್ಮಾಪಕ ಹಾಗೂ ಮ್ಯೂಸಿಕ್ ಕಂಪೋಸರ್ ಮಿಶಾಲ್ ಜತೆ ಪ್ರೀತಿಯಲ್ಲಿ ಬಿದ್ದಿರುವುದು ಗುಟ್ಟಾಗಿ ಉಳಿದಿಲ್ಲ. ತನ್ನ ಪ್ರಿಯತಮನ ಜತೆಗಿರುವ ಈಕೆಯ ಸಾಕಷ್ಟು ಫೋಟೊಗಳು ಆಗಾಗ ವೈರಲ್ ಆಗುತ್ತಿರುತ್ತಿವೆ. ಸದ್ಯ ಈ ಜೋಡಿಯ ಪ್ರೀತಿಯಲ್ಲಿ ಬಿರುಕು ಮೂಡಿರುವ ಅನುಮಾನ ಮೂಡಿದೆ. ಇದಕ್ಕೆ ಕಾರಣ ಇರಾ ಮಾಡಿರುವ ಆ ಒಂದು ಪೋಸ್ಟ್ ಎನ್ನಲಾಗ್ತಿದೆ.
ನಟ ಆಮೀರ್ ಖಾನ್ ಪುತ್ರಿ ಪ್ರೀತಿಯಲ್ಲಿ ಬಿರುಕು? - ಇರಾ ಖಾನ್
ಬಾಲಿವುಡ್ ನಟ ಆಮೀರ್ ಖಾನ್ ಮುದ್ದಿನ ಪುತ್ರಿ ಇರಾ ಖಾನ್ ಪ್ರೀತಿ-ಪ್ರೇಮ-ಪ್ರಣಯದ ವಿಚಾರವಾಗಿಯೇ ಸಖತ್ ಸದ್ದು ಮಾಡಿದವರು. ಈಗ ಅವರ ಪ್ರೀತಿಯಲ್ಲಿ ಬಿರುಕು ಉಂಟಾಗಿದೆ ಎನ್ನಲಾಗ್ತಿದೆ.
ಇಂದು ತನ್ನ ಹುಡುಗನ ಜತೆಗಿರುವ ರೊಮ್ಯಾಂಟಿಕ್ ಲುಕ್ವೊಂದನ್ನು ಇರಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾಗಿರೋ ಈ ಫೋಟೊ ನೋಡಿರುವ ಅಭಿಮಾನಿಗಳು, ಸ್ನೇಹಿತರು ವಾವ್ಹ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಚಿತ್ರದೊಂದಿಗೆ ಇರಾ ಬರೆದಿರುವ ಸಾಲೊಂದು ಇವರ ಪ್ರೀತಿಯಲ್ಲಿ ಏನಾದರೂ ತೊಡಕು ಉಂಟಾಯಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಈ ಚೆಲುವೆ ಬರೆದಿದ್ದೇನು ?
ತನ್ನನ್ನು ವಿಶಾಲ್ ಹಿಂದಿನಿಂದ ತಬ್ಬಿಕೊಂಡಿರುವ ಫೋಟೊ ಹಂಚಿಕೊಂಡಿರುವ ಇರಾ, 'ಎಲ್ಲವೂ ಸರಿಯಾಗುತ್ತೆ' ಎಂದು ಬರೆದು, ಒಂದು ಹಾರ್ಟ್ ಸಿಂಬಾಲ್ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದವರು ತನ್ನ ಹುಡುಗನೊಂದಿಗೆ ಜಗಳವಾಡಿಕೊಂಡ್ರಾ ಇರಾ? ಇಲ್ಲವೇ ಮನೆಯಿಂದ ಏನಾದ್ರೂ ತೊಂದರೆ ಆಯಿತಾ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಇವುಗಳಿಗೆ ಆಮೀರ್ ಪುತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.