ಕರ್ನಾಟಕ

karnataka

ETV Bharat / sitara

ಜಮ್ಮು ಕಾಶ್ಮೀರಕ್ಕೆ ಅಕ್ಷಯ್‌ ಕುಮಾರ್‌ ಭೇಟಿ: ಶಾಲಾ ನಿರ್ಮಾಣಕ್ಕಾಗಿ 1 ಕೋಟಿ ರೂ.ದೇಣಿಗೆ - ಬಂಡಿಪೋರಾ ಜಿಲ್ಲೆ

ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯ ಎಲ್‌ಒಸಿಯ ತುಲೇಲ್‌ ಪ್ರದೇಶಕ್ಕೆ ಭೇಟಿ ನೀಡಿದ್ದ ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌, ಸೈನಿಕರಿಗೆ ಮನೋಸ್ಥೈರ್ಯ ತುಂಬುವ ಜೊತೆಗೆ ನೀರೂ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 1 ಕೋಟಿ ರೂಪಾಯಿ ನೀಡಿದ್ದಾರೆ.

bollywood-actor-akshay-kumar-visits-bandiporas-tulail
ನಟ ಅಕ್ಷಯ್‌ ಕುಮಾರ್‌ ಜಮ್ಮು ಕಾಶ್ಮೀರಕ್ಕೆ ಭೇಟಿ; ಶಾಲಾ ನಿರ್ಮಾಣಕ್ಕಾಗಿ 1 ಕೋಟಿ ರೂ.ದೇಣಿಗೆ

By

Published : Jun 17, 2021, 6:04 PM IST

ಶ್ರೀನಗರ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯ ಎಲ್‌ಒಸಿಯ ತುಲೇಲ್‌ ಪ್ರದೇಶಕ್ಕೆ ಇಂದು ಭೇಟಿ, ಯೋಧರಿಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ನಟ ಅಕ್ಷಯ್‌ ಕುಮಾರ್‌ ಜಮ್ಮು ಕಾಶ್ಮೀರಕ್ಕೆ ಭೇಟಿ; ಶಾಲಾ ನಿರ್ಮಾಣಕ್ಕಾಗಿ 1 ಕೋಟಿ ರೂ.ದೇಣಿಗೆ

ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಲಿಕಾಪ್ಟರ್‌ನಲ್ಲಿ ನೀರೂ ಗ್ರಾಮವನ್ನು ತಲುಪಿದ ಅಕ್ಷಯ್‌, ಸೇನಾಧಿಕಾರಿಗಳು ಹಾಗೂ ಬಿಎಸ್ಎಫ್ ಯೋಧರೊಂದಿಗೆ ಸಂವಹನ ನಡೆಸಿದರು. ಇದೇ ವೇಳೆ ಬಿಎಸ್ಎಫ್ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ, ಸ್ಥಳೀಯರೊಂದಿಗೆ ಡ್ಯಾನ್ಸ್‌ ಮಾಡಿ ಖುಷಿ ಪಟ್ಟರು.

ಇದೇ ವೇಳೆ, ನೀರೂ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಅಕ್ಷಯ್‌ ಕುಮಾರ್ 1 ಕೋಟಿ ರೂಪಾಯಿ ನೀಡಿದರು. ಈ ಮೊದಲು ಅವರು ಬಿಎಸ್ಎಫ್ ಉನ್ನತ ಅಧಿಕಾರಿ ರಾಕೇಶ್ ಅಸ್ತಾನಾ ಅವರೊಂದಿಗೆ ಆಗಮಿಸಿ, ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಸೀಮಾ ಪ್ರಹಾರಿಸ್ ಅವರಿಗೆ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು. ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಗ್ಗೆ ಅಕ್ಷಯ್‌ ಕುಮಾರ್‌ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇವರ ಮುಂದಿನ ಚಿತ್ರ 'ಬೆಲ್ ಬಾಟಮ್' ಜುಲೈನಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details