ಬಾಯ್ಫ್ರೆಂಡ್ ಜತೆಗಿರುವ ಪೋಟೊಗಳನ್ನು ಹರಿಬಿಟ್ಟು ಸಂಚಲನ ಮೂಡಿಸಿದ್ದ ಇರಾ ಗ್ಲಾಮರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತಾ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬದಲಾಗಿ ಫಸ್ಟ್ ಟೈಮ್ ಫೋಟೊ ಶೂಟ್ ನಡೆಸಿದ್ದಾರೆ. ಚಿತ್ರರಂಗ ಹಾಗೂ ಮಾಡೆಲ್ಗೆ ಎಂಟ್ರಿ ಕೊಡುವ ಮುನ್ನ ಎಲ್ಲರೂ ಸುಂದರವಾದ ಫೋಟೊ ಶೂಟ್ ಮಾಡಿಸಿಕೊಳ್ಳುತ್ತಾರೆ. ಅದೇ ರೀತಿ ಇರಾ ಕೂಡ ಚಂದನೆಯ ಪಟಗಳನ್ನು ತೆಗೆಸಿಕೊಂಡಿದ್ದಾರೆ. ಕೊಂಚ ಡಿಫ್ರೆಂಟಾಗಿರಲಿ ಅಂತಾ ಬೋಲ್ಡ್ ಆಗಿ ಕ್ಯಾಮರಾ ಮುಂದೆ ಹಾಜರಾಗಿದ್ದಾರೆ.
ಲೈಮ್ಲೈಟ್ಗೆ ಮಿಸ್ಟರ್ ಫರ್ಪೆಕ್ಷನಿಸ್ಟ್ ಮುದ್ದಿನ ಮಗಳು...ಬೋಲ್ಡ್ ಲುಕ್ಗೆ ನೆಟ್ಟಿಗರು ಕ್ಲೀನ್ ಬೌಲ್ಡ್ - ಆಮೀರ್ ಖಾನ್ ಮುದ್ದಿನ ಮಗಳು ಇರಾ ಖಾನ್
ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮುದ್ದಿನ ಮಗಳು ಇರಾ ಖಾನ್ ಈಗಾಗಲೇ ಸೋಷಿಯಲ್ ಮೀಡಿಯಾ ಸ್ಟಾರ್. ಪ್ರೀತಿ-ಪ್ರೇಮ ಅಂತಾ ಸದ್ದು ಮಾಡುತ್ತಿರುವ ಕ್ಯೂಟ್ ಚೆಲುವೆ.
ಚಿತ್ರಕೃಪೆ: ಇನ್ಸ್ಟಾಗ್ರಾಂ
ಕಂದು ಬಣ್ಣದ ಮೇಲಂಗಿ ಹಾಗೂ ಶಾರ್ಟ್ಸ್ವೊಂದನ್ನು ತೊಟ್ಟು ಮಾದಕ ನೋಟ ಬೀರಿದ್ದಾರೆ. ಈ ಪರೀ ಬೋಲ್ಡ್ ಲುಕ್ಗೆ ಪೋಸ್ಟ್ ನೀಡಿರುವ ಇರಾ ಬಾಲಿವುಡ್ಗೆ ಬರುವ ಸೂಚನೆ ಕೊಟ್ಟಿದ್ದಾರೆ.