ಕರ್ನಾಟಕ

karnataka

By

Published : Dec 17, 2021, 6:08 PM IST

Updated : Dec 17, 2021, 6:56 PM IST

ETV Bharat / sitara

ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್‌ಐಆರ್!?

ನಿಯಮ ಉಲ್ಲಂಘಿಸಿ ನಟಿ ಆಲಿಯಾ ಭಟ್ ದೆಹಲಿಗೆ ಹೋಗಿದ್ದು ಬುಧವಾರ ಮತ್ತೆ ಮುಂಬೈಗೆ ಮರಳಿದ್ದಾರೆ. ಈ ಬಗ್ಗೆ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ ಪರೋಕ್ಷವಾಗಿ​ ಎಚ್ಚರಿಕೆ ನೀಡಿದ್ದು ಕಾನೂನು ಕ್ರಮ ಎದುರಿಸಲಿದ್ದಾರೆ ಎಂದಿದೆ.

BMC says no decision taken to file FIR against Alia Bhat After quarantine violation
BMC says no decision taken to file FIR against Alia Bhat After quarantine violation

ಮುಂಬೈ:ಹೋಮ್ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಲು ಇಲ್ಲಿನ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂದಾಗಿದೆ.

ತಮ್ಮ ಮುಂಬರುವ ಚಿತ್ರ ಬ್ರಹ್ಮಾಸ್ತ್ರದ ಪ್ರಚಾರಕ್ಕಾಗಿ ನಟ ರಣಬೀರ್ ಕಪೂರ್ ಅವರೊಂದಿಗೆ ಇತ್ತೀಚೆಗೆ ದೆಹಲಿಗೆ ತೆರಳಿದ್ದ ಆಲಿಯಾ ಭಟ್, ಹೋಮ್ ಕ್ವಾರಂಟೈನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾಹಿತಿ ಇದ್ದು ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ನಟಿ ಆಲಿಯಾ ಭಟ್

ಈಟಿವಿ ಭಾರತಕ್ಕೆ ಈ ಬಗ್ಗೆ ಮಾಹಿತಿ ನೀಡಿರುವ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ ಸಹಾಯಕ ಕಮಿಷನರ್ ನರೇಂದ್ರ ವಿಸ್ಪುಟೆ, ಸದ್ಯದ ಮಾಹಿತಿಯ ಪ್ರಕಾರ ನಟಿಯು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಕಾನೂನು ಕ್ರಮ ಎದುರಿಸಲಿದ್ದಾರೆ.

ಆದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲು ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪಾಸಿಟಿವ್ ಬಂದ ಜನರ ಜೊತೆಗೆ ಸಂಪರ್ಕ ಇದ್ದ ಕಾರಣ ಅವರಿಗೆ ಕ್ವಾರಂಟೈನ್​ನಲ್ಲಿರುವಂತೆ ಹೇಳಲಾಗಿತ್ತು. ಆದರೆ, ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ.

ಇತ್ತೀಚೆಗೆ ನಟಿ ಆಲಿಯಾ ಭಟ್ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆಲಿಯಾ ಭಟ್ ಸೇರಿದಂತೆ ಕೆಲವರಿಗೆ ನೆಗೆಟಿವ್​ ಕಾಣಿಸಿಕೊಂಡಿದ್ದರೆ ಹಲವರಲ್ಲಿ ಪಾಸಿಟಿವ್​ ಎಂದು ವರದಿ ಬಂದಿತ್ತು.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್

ಕರೀನಾ ಕಪೂರ್ ಖಾನ್, ಅಮೃತಾ ಅರೋರಾ, ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ಮತ್ತು ಸೀಮಾ ಖಾನ್ ಸೇರಿದಂತೆ ಪಾರ್ಟಿಯಲ್ಲಿದ್ದ ಹಲವರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಹಾಗಾಗಿ ನೆಗೆಟಿವ್​ ಕಾಣಿಸಿಕೊಂಡಿದ್ದರೂ ಆಲಿಯಾ ಭಟ್​ಗೆ 14 ದಿನಗಳ ಕಾಲ ಮನೆಯಲ್ಲಿರುವಂತೆ ಸಲಹೆ ನೀಡಲಾಗಿತ್ತು.

ಈ ನಿಯಮ ಉಲ್ಲಂಘಿಸಿ ಅವರು ದೆಹಲಿಗೆ ಹೋಗಿ ಬುಧವಾರ ಮತ್ತೆ ಮುಂಬೈಗೆ ಮರಳಿದ್ದಾರೆ. ನಟಿಯ ನಡೆ ಬಗ್ಗೆ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ ಪರೋಕ್ಷವಾಗಿ​ ಎಚ್ಚರಿಕೆ ನೀಡಿದ್ದು ಕಾನೂನು ಕ್ರಮ ಎದುರಿಸಲಿದ್ದಾರೆ ಎಂದಿದೆ.

ಇದನ್ನೂ ಓದಿ: ಬಾಲಿವುಡ್​ನ ಕರೀನಾ, ಅಮೃತಾಗೆ ಕೊರೊನಾ: ಮುಂಬೈನ ನಾಲ್ಕು ಕಟ್ಟಡಗಳು ಸೀಲ್​ಡೌನ್​​

Last Updated : Dec 17, 2021, 6:56 PM IST

ABOUT THE AUTHOR

...view details