ಬಾಲಿವುಡ್ನ ಯಶಸ್ವಿ ನಾಯಕ ರಣ್ವೀರ್ ಸಿಂಗ್ಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ರಣ್ವೀರ್ ಅವರ ಬಾಲಿವುಡ್ ಸಿನಿಮಾ ರಂಗದಲ್ಲಿನ ಅಸಾಧಾರಣ ಪಯಣದ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಹೀಗಿದೆ.
ಬರ್ತ್ಡೇ ಸ್ಪೆಷಲ್: ರಣ್ವೀರ್ ಸಿನಿಮಾ ಹಾದಿಯ ಏರಿಳಿತದ ಮಾಹಿತಿ ಇಲ್ಲಿದೆ
ಬಾಲಿವುಡ್ನ ಯಶಸ್ವಿ ನಾಯಕ ರಣ್ವೀರ್ ಸಿಂಗ್ಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ಈ ವೇಳೆ ಈಟಿವಿ ಭಾರತ ಸಿತಾರ, ರಣ್ವೀರ್ ಅವರ ಬಾಲಿವುಡ್ ಸಿನಿಮಾ ರಂಗದಲ್ಲಿನ ಅಸಾಧಾರಣ ಪಯಣದ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತಿದೆ.
ಬಾಲಿವುಡ್ಗೆ ಕಾಲಿಟ್ಟ ಆರಂಭದಲ್ಲಿ ಈತನ ಆಕರ್ಷಣೀಯವಲ್ಲದ ಫೇಸ್ನಿಂದ ಈ ಮಟ್ಟಕ್ಕೆ ಯಶಸ್ಸು ಸಾಧಿಸುತ್ತಾನೆ ಎಂದು ಎಣಿಸರಲಿಲ್ಲವಂತೆ. ಆದರೆ, ಈತನ ನಟನೆ ಎಲ್ಲರ ಮನಗೆದ್ದಿತ್ತು. ಬಳಿಕ ರಾಮ್ಲೀಲಾ, ಪದ್ಮಾವತ್, ಗುಂಡೆ ಹೀಗೆ ಹಲವಾರು ಸಿನಿಮಾಗಳ ಮೂಲಕ ಬಾಲಿವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿ ಮುನ್ನುಗ್ಗುತ್ತಿದ್ದಾರೆ.
ಇನ್ನು ರಣ್ವೀರ್ ಅಭಿನಯದ ಗಲ್ಲಿ ಬಾಯ್ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದಲ್ಲದೇ ಬಾಕ್ಸ್ ಆಫೀಸ್ನಲ್ಲಿ 238 ಕೋಟಿ ರೂ. ಗಳಿಸಿತ್ತು. ಇನ್ನು ನಟನೆಯ ಹೊರತಾಗಿ ರಣವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ತುಂಬಾ ವಿಭಿನ್ನವಾಗಿರುತ್ತದೆ. ಹೀಗೆ ಇನ್ನು ಹತ್ತು ಹಲವು ಇಂಟ್ರಸ್ಟಿಂಗ್ ವಿಷಯಗಳನ್ನ ರಣವೀರ್ ಹೊಂದಿದ್ದಾರೆ.