ಕರ್ನಾಟಕ

karnataka

ETV Bharat / sitara

ಬಯೋಪಿಕ್​ ಆಗಲಿದೆ ರಾನು ಮೊಂಡಲ್ ಜೀವನಚರಿತ್ರೆ..! - filmmaker Hrishikesh Mondal

ಒಂದೇ ಒಂದು ಹಾಡು ಹಾಡಿ ಸ್ಟಾರ್​ ಆಗಿರುವ ಪಶ್ಚಿಮ ಬಂಗಾಳ ಮೂಲದ ಮಹಿಳೆ ರಾನು ಮೊಂಡಲ್​​ ಇದೀಗ ಬಾಲಿವುಡ್​ನಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ. ಲತಾ ಮಂಗೇಶ್ಕರ್​ ಅವರ ಏಕ್​ ಪ್ಯಾರ್​ ಕಾ ನಗ್ಮಾ ಎಂಬ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಇವರಿಗೆ ಗಾಯಕ ಹಿಮೇಶ್​ ರೇಷ್ಮಿಯಾ ಅವಕಾಶ ನೀಡಿ, ಒಳ್ಳೆಯ ಸಂಭಾವನೆ ಕೂಡ ನೀಡಿದ್ದರು. ಇದೀಗ ಇವರ ಜೀವನ ಕಥೆಯನ್ನೇ ಬಾಲಿವುಡ್​ನಲ್ಲಿ ತೆರೆ ಮೇಲೆ ತರುವ ಪ್ರಯತ್ನ ನಡೆದಿದೆ.

ರಾನು ಮೊಂಡಲ್​​ (ಸಂಗ್ರಹ ಚಿತ್ರ)

By

Published : Sep 25, 2019, 2:35 PM IST

ಒಂದೇ ಒಂದು ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸೆನ್ಸೇಶನ್ ಹುಟ್ಟುಹಾಕಿದ್ದ ರಾನು ಮೊಂಡಲ್ ಜೀವನಚರಿತ್ರೆ ಪರದೆ ಮೇಲೆ ಮೂಡಿ ಬರಲಿದೆಯಂತೆ. ಬಯೋಪಿಕ್​​ಗಳ ಹಿಂದೆ ಬಿದ್ದಿರುವ ಬಾಲಿವುಡ್​ ಸಿನಿ ರಂಗ, ಇದೀಗ ರಾನು ಮೊಂಡಲ್ ಅವರ ಕಥೆಯನ್ನು ತೆರೆ ಮೇರೆ ತರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ನಿರ್ಮಾಪಕ ಹೃಷಿಕೇಶ್​​ ಮೊಂಡಲ್​ ಅವರು ಈ ಬಯೋಪಿಕ್​ ಮಾಡಲು ಸಿದ್ಧತೆ ನಡೆಸಿದ್ದಾರಂತೆ. ರಾನು ಪಾತ್ರವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಬಂಗಾಳಿ ನಟಿ ಸುದೀಪ್ತಾ ಚಕ್ರವರ್ತಿಯನ್ನು ಸಂಪರ್ಕಿಸಲಾಗಿದೆಯಂತೆ.

ರಾನು ಮೊಂಡಲ್​ (ಸಂಗ್ರಹ ಚಿತ್ರ)

ಈ ಬಗ್ಗೆ ನಟಿ ಸುದೀಪ್ತಾ ಚಕ್ರವರ್ತಿ ಸಹ ಸ್ಪಷ್ಟನೆ ನೀಡಿದ್ದಾರೆ. ನನಗೆ ಈ ಸದಾವಕಾಶ ಹುಡುಕಿಕೊಂಡು ಬಂದಿದ್ದು ನಿಜ. ಆದರೆ, ನಾನಿನ್ನೂ ಸ್ಕ್ರಿಪ್ಟ್ ಓದಿಲ್ಲ. ಓದಿದ ನಂತರವೇ ನನ್ನ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.

ಮತ್ತೊಂದೆಡೆ ಒಂದೇ ಹಾಡಿನ ಮೂಲಕ ಸ್ಟಾರ್​ ಆದ ಈ ಬಡ ಗಾಯಕಿಯ ಬಯೋಪಿಕ್​ ತರಲು ಇದು ಸೂಕ್ತ ಸಮಯ ಎಂದಿದ್ದಾರೆ ನಿರ್ಮಾಪಕ ಹೃಷಿಕೇಶ್​​ ಮೊಂಡಲ್​. ರಾನು ಮೊಂಡಲ್​ ಅವರ ತವರೂರಾದ ರಾಣಾ ಘಾಟ್, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆಯಂತೆ. ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ABOUT THE AUTHOR

...view details