ನೊಯ್ಡಾ: ದೇಶಾದ್ಯಂತ ಲಾಕ್ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಅನೇಕ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ಈ ಮಧ್ಯೆ ಹಿಂದಿ ಬಿಗ್‌ಬಾಸ್ ಸೀಸನ್- 2ರ ವಿನ್ನರ್ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನೊಯ್ಡಾದಲ್ಲಿರುವ ಮನೆಯ ಟೆರೇಸ್ ಮೇಲೆಯೇ ಆಶುತೋಶ್ ಕೌಶಿಕ್ ಮದುವೆಯಾಗಿದ್ದು, ಅದರ ವಿಡಿಯೋವನ್ನು ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಅರ್ಪಿತಾ ತಿವಾರಿ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ.