ಹೈದರಾಬಾದ್(ತೆಲಂಗಾಣ) : ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಭಾನುವಾರ ರಾತ್ರಿ ಬಿಗ್ ಬಾಸ್-15ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆಯ ನಂತರ ತೇಜಸ್ವಿ ಮನೆಗೆ ಮರಳಿದರು. ಈ ವೇಳೆ ಆಕೆಗೆ ಪೋಷಕರು ಭವ್ಯವಾಗಿ ಸ್ವಾಗತಿಸಿದರು.
ಮನೆಗೆ ಬಂದ ಬಿಗ್ಬಾಸ್ ವಿಜೇತೆಗೆ ವಿಶೇಷವಾಗಿ ಬರ ಮಾಡಿಕೊಂಡ ಪೋಷಕರು ಕಾರ್ಯಕ್ರಮದಲ್ಲಿ ಮೂರನೇ ಸ್ಥಾನ ಪಡೆದ ತೇಜಸ್ವಿ ಅವರ ಗೆಳೆಯ ಕರಣ್ ಕುಂದ್ರಾ ಅವರು ಬಿಗ್ ಬಾಸ್ ಮನೆಯಲ್ಲಿ 120 ದಿನಗಳನ್ನು ಕಳೆದ ನಂತರ ಮನೆಗೆ ಮರಳಿ ತೇಜಸ್ವಿ ಅವರ ಜೊತೆಗಿದ್ದರು. ಭಾನುವಾರ ರಾತ್ರಿ ಈ ವರ್ಷದ ಬಿಗ್ ಬಾಸ್ 15ರ ಥೀಮ್‌ನಿಂದ ಪ್ರೇರಿತವಾದ ಜಂಗಲ್-ಥೀಮಿನ ಅಲಂಕಾರದೊಂದಿಗೆ ಆಕೆಯ ಪೋಷಕರು ಅವಳನ್ನು ಮನೆಗೆ ಸ್ವಾಗತಿಸಿದಾಗ ತೇಜಸ್ವಿ ಆಶ್ಚರ್ಯಚಕಿತರಾದರು.
ಓದಿ:ಬಿಗ್ ಬಾಸ್ 15ರ ವಿಜೇತರಾಗಿ ಹೊರಹೊಮ್ಮಿದ ತೇಜಸ್ವಿ ಪ್ರಕಾಶ್!
Swaragini - Jodein Rishton Ke Sur ಧಾರಾವಾಹಿ ಮೂಲಕ ಹೆಸರುವಾಸಿಯಾದ ಪ್ರಕಾಶ್, ಬಿಗ್ ಬಾಸ್ ಟ್ರೋಫಿ ಜೊತೆ ₹40 ಲಕ್ಷ ನಗದು ಬಹುಮಾನವನ್ನು ಮನೆಗೆ ತೆಗೆದುಕೊಂಡರು. ಕಾರ್ಯಕ್ರಮದ ನಿರೂಪಕ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿಜೇತರನ್ನು ಘೋಷಿಸಿದ್ದರು.
ಪ್ರತೀಕ್ ಸೆಹಜ್‌ಪಾಲ್ ಮೊದಲ ರನ್ನರ್ ಅಪ್ ಆಗಿದ್ದರೆ, ಶಮಿತಾ ಶೆಟ್ಟಿ ನಾಲ್ಕನೇ ಸ್ಥಾನ ಪಡೆದರು ಮತ್ತು ನೃತ್ಯ ನಿರ್ದೇಶಕ ನಿಶಾಂತ್ ಭಟ್ ಫಿನಾಲೆ ರೇಸ್‌ನಿಂದ ಹೊರಗುಳಿದು 10 ಲಕ್ಷ ರೂಪಾಯಿಗಳನ್ನು ಪಡೆಯುವುದರ ಜೊತೆಗೆ ಐದನೇ ಸ್ಥಾನ ಅಲಂಕರಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ