ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್​ ಸ್ಪರ್ಧಿ ರಾಕೇಶ್​ ಬಾಪಟ್​ಗೆ ಕಿಡ್ನಿ ಸ್ಟೋನ್​; ಶೋನಿಂದ ಹೊರ ಬಂದ ಸ್ಪರ್ಧಿ - ಶೋನಿಂದ ಹೊರಕ್ಕೆ

ಬಿಗ್​ಬಾಸ್​ ಸ್ಪರ್ಧಿ ರಾಕೇಶ್​ ಬಾಪಟ್ ಕಿಡ್ನಿ ಸ್ಟೋನ್​ನಿಂದಾಗಿ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ​ನವೆಂಬರ್​ 8ರಂದೇ ಬಿಗ್​ಬಾಸ್​ನಿಂದ ಹೊರಬಂದಿದ್ದಾರೆ.

raqesh bapat hospitalised
ಹಿಂದಿ ಬಿಗ್​ಬಾಸ್​ ಸ್ಪರ್ಧಿ ರಾಕೇಶ್​ ಬಾಪಟ್​

By

Published : Nov 10, 2021, 1:30 PM IST

ಹೈದರಾಬಾದ್​(ತೆಲಂಗಾಣ):ಹಿಂದಿ ಬಿಗ್​ಬಾಸ್​ 15ನೇ ಅವತರಣಿಕೆಯ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ರಾಕೇಶ್​ ಬಾಪಟ್​​ ಅವರಿಗೆ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡು ನೋವು ಉಲ್ಬಣಗೊಂಡ ಪರಿಣಾಮ ಬಿಗ್​ಬಾಸ್​ ಶೋನಿಂದ ಹೊರಬಂದಿದ್ದಾರೆ.

ಅಲ್ಲದೇ, ಅವರನ್ನು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಬಿಗ್​ಬಾಸ್​ ಸ್ಪರ್ಧಿ ರಾಕೇಶ್​ ಬಾಪಟ್​ನವೆಂಬರ್​ 8ರಂದೇ ಬಿಗ್​ಬಾಸ್​ನಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ. ನೋವು ತೀವ್ರವಾದ ಕಾರಣ ಅವರು ಶೋ ಅನ್ನು ತ್ಯಜಿಸಿದ್ದಾರೆ. ಚಿಕಿತ್ಸೆ ಬಳಿಕ ಮತ್ತೆ ಅವರು ಬಿಗ್​ಬಾಸ್​ ಶೋಗೆ ಮರಳುವ ವಿಶ್ವಾಸ ಹೊಂದಿದ್ದಾರೆ.

ಈ ಹಿಂದೆ ನಡೆದ ಬಿಗ್​ಬಾಸ್​ ಒಟಿಟಿಯಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಮತ್ತು ರಾಕೇಶ್​ ಲವ್​ಬರ್ಡ್ಸ್ ಆಗಿ ಕಾಣಿಸಿಕೊಂಡಿದ್ದರು. ಈ ಜೋಡಿ ಶೋ ಉದ್ದಕ್ಕೂ ಉತ್ತಮ ಮನರಂಜನೆ ನೀಡುತ್ತಾ ಬಂದಿದ್ದರು. ವೀಕ್ಷಕರು ಕೂಡ ಈ ಜೋಡಿಯನ್ನು ಮೆಚ್ಚಿದ್ದರು. ಇದೀಗ ಬಿಗ್​ಬಾಸ್​ 15ರಲ್ಲೂ ರಾಕೇಶ್​ ಬಾಪಟ್​ ಸ್ಪರ್ಧಿಯಾಗಿ ಮನೆ ಸೇರಿಕೊಂಡಿದ್ದರು.

ABOUT THE AUTHOR

...view details