ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್​-14: ವೈಲ್ಡ್​​ ಕಾರ್ಡ್​ ಎಂಟ್ರಿ ಬಳಿಕ ಕವಿತಾ ಕೌಶಿಕ್​ರಲ್ಲಿ ಗಮನಾರ್ಹ ಬದಲಾವಣೆ! - ಬಿಗ್​ಬಾಸ್​-14 ಸ್ಪರ್ಧಿ ಕವಿತಾ ಕೌಶಿಕ್​​ ಸುದ್ದಿ

ಬಿಗ್ ಬಾಸ್ ಸೀಸನ್​ 14 ಸ್ಪರ್ಧಿ ಕವಿತಾ ಕೌಶಿಕ್ ಅವರಿಗೆ ಮತ್ತೆ ಬಿಗ್​ ಬಾಸ್​ ಮನೆ ಪ್ರವೇಶಕ್ಕೆ ವೈಲ್ಡ್​​ ಕಾರ್ಡ್​ ಎಂಟ್ರಿ ಮೂಲಕ ಅವಕಾಶ ನೀಡಿದೆ. ಆ ಬಳಿಕ, ಬಿಗ್ ಬಾಸ್ ಗೆಲ್ಲಲು ಆಕೆ ಉತ್ತಮ ಪ್ರದರ್ಶನ ನೀಡಲು ಆರಂಭಿಸಿದ್ದಾಳೆ.

Bigg Boss 14
ಕವಿತಾ ಕೌಶಿಕ್​​

By

Published : Nov 28, 2020, 1:55 PM IST

ಮುಂಬೈ: ಬಿಗ್ ಬಾಸ್ -14ರ ಸ್ಪರ್ಧಿ ಕವಿತಾ ಕೌಶಿಕ್ ಇತ್ತೀಚೆಗೆ ತಮ್ಮ ದುಡುಕಿನ ಮನೋಭಾವದಿಂದಾಗಿ ಬಿಗ್​​ಬಾಸ್​ ಮನೆಯಿಂದ ಹೊರಹೋಗಿದ್ದರು. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮರುಪ್ರವೇಶ ಮಾಡಿದ್ದು, ಅವರಲ್ಲಿ ಬಹಳ ಬದಲಾವಣೆಗಳನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

ಕವಿತಾ ವರ್ತನೆಯಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಮತ್ತೆ ಪ್ರವೇಶ ಪಡೆದಿರಬಹುದು ಎಂದು ಬಿಗ್​ಬಾಸ್​ ವೀಕ್ಷಕರು ಅಂದುಕೊಳ್ತಿದ್ದಾರೆ. ಈ ಮೊದಲು ಪವಿತ್ರಾ ಪುನಿಯಾ ಜೊತೆ ಕವಿತಾ ಕೌಶಿಕ್ ಕಿರಿಕ್​ ಮಾಡಿಕೊಂಡಿದ್ದರು. ಆರಂಭದಲ್ಲಿ ಕವಿತಾಳನ್ನು ತನ್ನ "ಉತ್ತಮ ಸ್ನೇಹಿತೆ" ಎಂದು ಕರೆದಿದ್ದರು ಪವಿತ್ರಾ. ಐಜಾಜ್ ಖಾನ್ ಅವರೊಂದಿಗೆ ಕವಿತಾ ತೀವ್ರ ವಾಗ್ವಾದ ಕೂಡ ಮಾಡಿಕೊಂಡಿದ್ದರು.

ಐಜಾಜ್ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆದ ನಂತರ ಅವನು ಕವಿತಾರಿಗೆ ಬಿಗ್​ಬಾಸ್​ ಮನೆಯ ನಿಯಮಗಳನ್ನು ಅನುಸರಿಸುವಂತೆ ಆಗ್ರಹಿಸುತ್ತಿದ್ದ. ಇದು ಆಕೆಯನ್ನು ಮತ್ತಷ್ಟು ಕೆರಳಿಸುವಂತೆ ತೋರುತ್ತಿತ್ತು. ಉದ್ರಿಕ್ತಗೊಂಡ ಕವಿತಾ ಕೆಟ್ಟ ಪದ ಬಳಕೆ ಮತ್ತು ಉಗುಳುವ ಮೂಲಕ ಐಜಾಜ್ ನೊಂದಿಗೆ ಕಾದಾಟಕ್ಕಿಳಿದಿದ್ದಳು. ಆದಾದ ಬಳಿಕ ಎಲಿಮಿನೇಷನ್​ನಲ್ಲಿ ಕವಿತಾ ಹೆಸರು ಹೆಚ್ಚು ಕೇಳಿ ಬಂದಿದ್ದರಿಂದ ಹಾಗೂ ಪ್ರೇಕ್ಷಕರಿಂದ ಕಡಿಮೆ ವೋಟ್​​ ಪಡೆದ ನಂತರ ಕವಿತಾ ಅವರನ್ನು ಬಿಗ್​ಬಾಸ್​ನಿಂದ ಎಲಿಮಿನೆಟ್​ ಮಾಡಲಾಗಿತ್ತು.

ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದು ಪುನಃ ಬಿಗ್​ಬಾಸ್​ ಮನೆ ಸೇರಿದ ಮೇಲೆ ಆರಂಭದಲ್ಲಿ ಕವಿತಾಗೆ ಆಟದ ಬಗ್ಗೆ ಆಸಕ್ತಿ ಇಲ್ಲ ಎನ್ನುವಂತೆ ತೋರುತ್ತಿತ್ತು. ಮನೆಯ ಯಾವುದೇ ಕೆಲಸ, ಚಟುವಟಿಕೆಯಿಂದ ಕವಿತಾ ದೂರ ಉಳಿದಿದ್ದರು. ಇದು ವೀಕ್ಷಕರನ್ನು ತನ್ನತ್ತ ಸೆಳೆಯಲು ಮಾಡಿದ ತಂತ್ರ ಎಂಬ ಮಾತು ಕೇಳಿ ಬಂದಿತ್ತು.

ಆದರೆ, 2ನೇ ಬಾರಿಗೆ ಕ್ಯಾಪ್ಟನ್ ಆದ ಬಳಿಕ ಕವಿತಾ ತನಗಾಗಿ ಆಡುತ್ತಿದ್ದಾಳೆ ಮತ್ತು ಆಲಿ ಗೋನಿ, ಜಾಸ್ಮಿನ್ ಭಾಸಿನ್, ಅಭಿನವ್ ಶುಕ್ಲಾ ಮತ್ತು ರುಬಿನಾ ಡಿಲೈಕ್ ಅವರಂತಹ ಹೌಸ್ಮೇಟ್‌ಗಳಿಗೆ ಉತ್ತಮ ಕಾಂಪಿಟೇಷನ್​ ನೀಡುತ್ತಿದ್ದಾಳೆ. ಇದನ್ನೆಲ್ಲಾ ಗಮನಿಸಿದರೆ ಕವಿತಾಗೆ ಬಿಗ್​ಬಾಸ್​ ವಿನ್ನರ್​ ಆಗಲು ಮತ್ತೊಂದು ಅವಕಾಶ ದೊರೆತಂತೆ ಕಾಣುತ್ತದೆ.

ABOUT THE AUTHOR

...view details