ಮುಂಬೈ: ಬಿಗ್ಬಿ ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅಭಿನಯದ ಮೊದಲ ಚಿತ್ರ ಬನ್ಸಿ ಬಿರ್ಜು ರಿಲೀಸ್ ಸೆಪ್ಟೆಂಬರ್ 1 ಕ್ಕೆ 49 ವರ್ಷಗಳು ಪೂರೈಸಿದ್ದು, ಆ ಸುಮಧುರ ಕ್ಷಣವನ್ನು ಬಿಗ್ ಬಿ ಮೆಲುಕು ಹಾಕಿದ್ದಾರೆ.
ಈ ಕುರಿತು ಬಿಗ್ಬಿ, ಬ್ಲ್ಯಾಕ್ ಅಂಡ್ ವೈಟ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಜಯಾ ಬಚ್ಚನ್ ಅವರ ತೋಳುಗಳನ್ನು ಬಳಸಿ ಅಪ್ಪಿಕೊಂಡಿರುವುದು ಕಂಡು ಬರುತ್ತದೆ. ಇದು ನಮ್ಮ ಮೊದಲ ಚಿತ್ರ ಬನ್ಸಿ ಬಿರ್ಜು. ಸೆಪ್ಟೆಂಬರ್ 1 1970 ರಲ್ಲಿ ರಿಲೀಸ್ ಆಗಿತ್ತು ಎಂದು ಪೋಸ್ಟ್ಗೆ ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋಗೆ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಹಾರ್ಟ್ ಸಿಂಬಲ್ ಕೊಟ್ಟಿದ್ದಾರೆ.