ಕರ್ನಾಟಕ

karnataka

ETV Bharat / sitara

ಝಂದ್​ ಚಿತ್ರದ ಪ್ರಚಾರದ ವೇಳೆ ತಂದೆಯನ್ನು ಸ್ಮರಿಸಿದ ಬಿಗ್​ ಬಿ - ಝಂದ್​ ಚಿತ್ರದ ಪ್ರಚಾರದ ವೇಳೆ ತಂದೆಯನ್ನು ನೆನೆದ ಬಿಗ್​ ಬಿ

ಹಿರಿಯ ನಟ ಅಮಿತಾಬ್ ಬಚ್ಚನ್ ದಿನವಿಡಿ ತಮ್ಮ ಮುಂಬರುವ ಚಿತ್ರ ಝಂದ್(Jhund)​ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಅವರು ತಮ್ಮ ತಂದೆಯವರನ್ನು ಸ್ಮರಿಸಿಕೊಂಡಿದ್ದು ವಿಶೇಷ.

big-b-remembers-fathers-thoughts
ಹಿರಿಯ ನಟ ಅಮಿತಾಬ್ ಬಚ್ಚನ್

By

Published : Jan 21, 2020, 7:43 PM IST

ಹಿರಿಯ ನಟ ಅಮಿತಾಬ್ ಬಚ್ಚನ್ ದಿನವಿಡಿ ತಮ್ಮ ಮುಂಬರುವ ಚಿತ್ರ ಝಂದ್(Jhund)​ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ, ಅವರು ತಮ್ಮ ತಂದೆಯವರನ್ನು ಸ್ಮರಿಸಿಕೊಂಡಿದ್ದಾರೆ.

‘ನನ್ನ ಅಜ್ಜಿ ದಿನಕ್ಕೆ ಒಮ್ಮೆ ಸರಸ್ವತಿ, ಸ್ವತಃ ವ್ಯಕ್ತಿಯ ನಾಲಿಗೆಯ ಮೂಲಕ ಮಾತನಾಡುತ್ತಾರೆ ಎಂದು ಹೇಳುತ್ತಿದ್ದರು.’ ಎಂದು ಅಮಿತಾಬ್​ ನೆನಪಿಸಿಕೊಂಡಿದ್ದಾರೆ.

’ಬಾಬುಜಿ ತಮ್ಮ ಮೊದಲ ಪುಸ್ತಕದ ಪ್ರಕಟಣೆಯ ಕುರಿತು ಬರೆದುಕೊಂಡಿದ್ದರು. ಆಗ ಅವರು ತುಂಬಾ ಟೀಕೆಗೆ ಒಳಗಾಗಿದ್ದರು. ಆಗ ಪುಸ್ತಕವನ್ನು ತೀವ್ರವಾಗಿ ಟೀಕಿಸಲಾಯಿತು. ಇಂದು ಆಗಿದ್ದರೆ ನಾನು ಅದನ್ನು ಉತ್ಪ್ರೇಕ್ಷೆ ಎಂದು ಕರೆಯುತ್ತಿದ್ದೆ. ಕವಿಯನ್ನು ಪ್ರೋತ್ಸಾಹಿಸಬೇಕಾಗಿತ್ತು. ಪ್ರೋತ್ಸಾಹ ಎನ್ನುವುದು ವಿಶ್ವಾಸವನ್ನು ಮತ್ತುಷ್ಟು ಹೆಚ್ಚಿಸುತ್ತದೆ’ ಎಂದು ಟ್ವೀಟ್​ ಮಾಡಿ ಸ್ಮರಣೆ ಮಾಡಿಕೊಂಡಿದ್ದಾರೆ.

ಬಚ್ಚನ್ ತಮ್ಮ ಆಲೋಚನೆಗಳನ್ನು ಪೂರ್ವಭಾವಿಯಾಗಿ ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇದು ಅವರ 3,416 ನೇ ಟ್ವೀಟ್.

ಮರಾಠಿ ಚಲನಚಿತ್ರ ನಿರ್ಮಾಪಕ ನಾಗರಾಜ್ ಮಂಜುಲೆ ಅವರ ನಿರ್ದೇಶನದ ಝಂದ್​ ಚಲನಚಿತ್ರವು ಸ್ಲಮ್ ಸಾಕರ್ ಸಂಸ್ಥಾಪಕ ವಿಜಯ್ ಬಾರ್ಸೆ ಅವರ ಜೀವನವನ್ನು ಆಧರಿಸಿದೆ. ಮೇ 8 ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಅಮಿತಾಬ್​ ಆ ಚಿತ್ರದ ಪ್ರಮೋಷನ್​ನಲ್ಲಿ ಬ್ಯೂಸಿಯಾಗಿದ್ದಾರೆ.

ABOUT THE AUTHOR

...view details