ಮುಂಬೈ :ಬಾಲಿವುಡ್ ಹಿರಿಯ ನಟ ಬಿಗ್-ಬಿ ಅಮಿತಾಭ್ ಬಚ್ಚನ್ ತನ್ನ ಕಣ್ಣುಗಳು ಮಂಜಾಗುತ್ತಿದ್ದು, ಕೆಲವೇ ದಿನಗಳಲ್ಲಿ ತಾನು ಕುರುಡಾಗಬಹುದು ಎಂದಿದ್ದಾರೆ. ನಿಧಾನವಾಗಿ ತನ್ನ ಕಣ್ಣಿನ ದೃಷ್ಟಿ ಮಂಜಾಗುತ್ತಿರುವ ಬಗ್ಗೆ ಅಮಿತಾಭ್ ಸ್ವತಃ ಹೇಳಿಕೊಂಡಿದ್ದಾರೆ.
"ನೋಟ ಮಂಜಾಗುತ್ತಿದೆ, ಆಕೃತಿಗಳು ಅಸ್ಪಷ್ಟವಾಗಿ ಕಾಣುತ್ತಿವೆ.. ಈಗ ಕೆಲವು ದಿನಗಳಿಂದ ಎಲ್ಲವೂ ಎರಡೆರಡಾಗಿ ಕಾಣುತ್ತಿವೆ. ಇನ್ನೇನು ಕೆಲ ದಿನಗಳಲ್ಲಿ ನಾನು ಪೂರ್ಣ ಕುರುಡಾಗಲಿದ್ದೇನೆ ಎಂಬುದು ತಿಳಿಯುತ್ತಿದೆ. ಈಗಾಗಲೇ ಇರುವ ನೂರಾರು ಆರೋಗ್ಯ ಸಮಸ್ಯೆಗಳ ಮಧ್ಯೆ ಇದೊಂದು ಶುರುವಾಗಿದೆ..." ಎಂದು ಬಚ್ಚನ್ ಅತ್ಯಂತ ನೋವಿನಿಂದ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.