ಮುಂಬೈ: ಜೀ ಕಾಮಿಡಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಭಾಗ್ಯಶ್ರೀ ತಮ್ಮ 1989ರ ಸಿನಿಮಾ ಮೈನೆ ಪ್ಯಾರ್ ಕಿಯಾ ಚಿತ್ರೀಕರಣದ ಸಮಯದಲ್ಲಿ ಚುಂಬನ ಮತ್ತು ಅಪ್ಪಿಕೊಳ್ಳುವ ದೃಶ್ಯ ಮಾಡಲು ಏಕೆ ಆಗುತ್ತಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಅವರು ಮೈನೆ ಪ್ಯಾರ್ ಕಿಯಾ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಹೊಂದಿದ್ದ ಆತಂಕದ ಕ್ಷಣವನ್ನು ಹೇಳಿದ್ದಾರೆ. ಆಗ ನನಗೆ 18 ವರ್ಷ, ಆ ಸಮಯದಲ್ಲಿ ನಾನು ಪ್ರೀತಿಯಲ್ಲಿ ಬಿದ್ದಿದ್ದೆ. ಮದುವೆ ಮಾಡಿಕೊಳ್ಳಲು ಮುಂದಾಗಿದ್ದೆ. ಆದರೆ, ನಾನು ಅದುವರೆಗೂ ಒಬ್ಬ ವ್ಯಕ್ತಿಯನ್ನೂ ಕೂಡ ಅಪ್ಪಿಕೊಂಡಿರಲಿಲ್ಲ.
ಆದರೆ, ಮೈನೆ ಪ್ಯಾರ್ ಕಿಯಾದಲ್ಲಿ ಅಪ್ಪಿಕೊಳ್ಳುವ ಮತ್ತು ಚುಂಬನದ ದೃಶ್ಯ ಮಾಡುವ ಅನಿವಾರ್ಯತೆ ಎದುರಾಯಿತು. ಆಗ ನಾನು ಅಳಲು ಶುರು ಮಾಡಿದೆ. ಅರ್ಧ ಗಂಟೆ ನಂತರ ಸಲ್ಮಾನ್ ನನ್ನ ಬಳಿ ಬಂದು ಸಮಾಧಾನ ಮಾಡಿ, ತುಂಬಾ ಮುಗ್ಧತೆಯಿಂದ ನನ್ನ ಬಳಿ ಕೇಳಿಕೊಂಡರು. ಆಗ ನಾನು ಇಲ್ಲ ಎನ್ನಲು ಸಾಧ್ಯ ಆಗಲಿಲ್ಲ ಎಂದಿದ್ದಾರೆ.
ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ಗೆ ಅಪ್ಪುಗೆ, ಚುಂಬನ ಚಿತ್ರದಲ್ಲಿ, ಸಲ್ಮಾನ್ ಮತ್ತು ಭಾಗ್ಯಶ್ರೀ ಪರಸ್ಪರ ಮುತ್ತಿಡಬೇಕಾದ ಇನ್ನೊಂದು ದೃಶ್ಯವಿತ್ತು. ಅದರಲ್ಲೂ ಕೂಡ ಇದೇ ಪರಿಸ್ಥಿತಿ ನಿರ್ಮಾಣ ಆಗಿ ಬೇರೆಯದೇ ಮಾರ್ಗದಲ್ಲಿ ಈ ದೃಶ್ಯ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಭಾಗ್ಯಶ್ರೀ, ಅದನ್ನು ನಡುವೆ ಗಾಜು ಇರಿಸಿ ಚಿತ್ರೀಕರಿಸಲಾಗಿದೆ.
ನಾನು ಮದುವೆಯಾಗಲು ಹೊರಟಿದ್ದೆ. ಹಾಗಾಗಿ, ನನಗೆ ಚುಂಬನ ದೃಶ್ಯವನ್ನು ಮಾಡಲು ಆರಾಮದಾಯಕವಾಗಿರಲಿಲ್ಲ. ನಿರ್ದೇಶಕರು ನಮ್ಮ ನಡುವೆ ಒಂದು ಗಾಜನ್ನು ಇರಿಸುವ ಆಲೋಚನೆಯನ್ನು ಮಾಡಿದರು. ಆ ಮುಖಾಂತರ ಚುಂಬನ ಚಿತ್ರೀಕರಣ ಮಾಡಲಾಯಿತು ಎಂದು ನೆನಪಿಸಿಕೊಂಡರು.