ವಿಜಯ್ ದೇವರಕೊಂಡ ನಟನೆಯ 'ಅರ್ಜುನ್ ರೆಡ್ಡಿ' ತಮಿಳು ಹಾಗೂ ಹಿಂದಿಗೆ ರೀಮೇಕ್ ಆಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ತಮಿಳಿನಲ್ಲಿ ಈ ಸಿನಿಮಾ 'ಆದಿತ್ಯ ವರ್ಮಾ' ಹೆಸರಿನಲ್ಲಿ ರೀಮೇಕ್ ಆಗುತ್ತಿದ್ದು ವಿಕ್ರಮ್ ಪುತ್ರ ಧ್ರುವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿಗರೇಟನ್ನೇ ಮುಟ್ಟದ ಶಾಹಿದ್ ಆ ಪಾತ್ರಕ್ಕಾಗಿ ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದಾರಂತೆ..!
ಎಂದಿಗೂ ಸಿಗರೇಟನ್ನೇ ಮುಟ್ಟದ ಶಾಹೀದ್ ಕಪೂರ್ ಈ ಸಿನಿಮಾ ಪಾತ್ರ ನ್ಯಾಚುರಲ್ ಆಗಿ ಬರಲೆಂದು ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದಾರಂತೆ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳ ಬಟ್ಟೆಗಳನ್ನು ಕೇಳಿ ಪಡೆದು ಧರಿಸುತ್ತಿದ್ದಾರಂತೆ.
ಇನ್ನು ಹಿಂದಿಯಲ್ಲಿ 'ಕಬೀರ್ ಸಿಂಗ್' ಹೆಸರಿನಲ್ಲಿ ರೀಮೇಕ್ ಆಗುತ್ತಿರುವ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪಾತ್ರವನ್ನು ನಟ ಶಾಹೀದ್ ಕಪೂರ್ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಶಾಹೀದ್ ಈ ಪಾತ್ರಕ್ಕಾಗಿ ಸಾಕಷ್ಟು ಹಾರ್ಡ್ ವರ್ಕ್ ಮಾಡುತ್ತಿದ್ದಾರಂತೆ. ತಮ್ಮ ಜೀವನದಲ್ಲಿ ಸಿಗರೇಟನ್ನೇ ಮುಟ್ಟದ ಶಾಹೀದ್ ಈ ಸಿನಿಮಾ ಪಾತ್ರ ನ್ಯಾಚುರಲ್ ಆಗಿ ಬರಲೆಂದು ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದಾರಂತೆ. ಅಷ್ಟೇ ಅಲ್ಲದೆ ದೆಹಲಿ ವಿದ್ಯಾರ್ಥಿಗಳ ಬಳಿ ಬಟ್ಟೆಗಳನ್ನು ಕೇಳಿ ಪಡೆದು ಅದನ್ನೇ ಧರಿಸುತ್ತಿರುವುದಲ್ಲದೆ ವಿದ್ಯಾರ್ಥಿಗಳ ಚಲನವಲನಗಳನ್ನು ಕಲಿಯಲು ಅವರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾರಂತೆ.
ಮೇ 13 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಸಂದೀಪ್ ರೆಡ್ಡಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಸಿನಿ 1 ಸ್ಟುಡಿಯೋಸ್ ಹಾಗೂ ಟಿ-ಸೀರೀಸ್ ಜೊತೆಗೂಡಿ ಸಿನಿಮಾವನ್ನು ನಿರ್ಮಿಸುತ್ತಿವೆ. ಕೈರಾ ಅಡ್ವಾಣಿ ಸಿನಿಮಾದಲ್ಲಿ ಶಾಹೀದ್ಗೆ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 21 ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.