ಮುಂಬೈ: ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾ ರಿಲೀಸ್ಗೆ ರೆಡಿ ಆಗಲಿದೆ. ಈಗಾಗಲೇ ಚಿತ್ರ ತಂಡ ಸಿನಿಮಾ ಪ್ರಮೋಷನ್ ಶುರು ಮಾಡಿಕೊಂಡಿದ್ದು, ಲವರ್ ಬಾಯ್ ವಿಕ್ರಮಾದಿತ್ಯನ ಪಾತ್ರದಲ್ಲಿ ಪ್ರಭಾಸ್ ಹಾಗೂ ಪ್ರೇರಣಾ ಪಾತ್ರದಲ್ಲಿ ಪೂಜಾ ಹೆಗಡೆ ಕಾಣಿಸಿಕೊಂಡಿದ್ದಾರೆ.
ಇನ್ನೂ ಯಾಕೆ ಮದುವೆ ಆಗಿಲ್ಲವೆಂಬ ಸತ್ಯ ಬಿಚ್ಚಿಟ್ಟ 'ಬಾಹುಬಲಿ' ಪ್ರಭಾಸ್ - ಪೂಜಾ ಹೆಗ್ಡೆ
ಮಾರ್ಚ್ 11 ರಂದು 'ರಾಧೆ ಶ್ಯಾಮ್' ಚಿತ್ರ ತೆರೆ ಕಾಣಲಿದ್ದು, ಸಿನಿಮಾ ಪ್ರಮೋಷನ್ ವೇಳೆ ನಟ ಪ್ರಭಾಸ್ ತಾವು ಇನ್ನು ಯಾಕೆ ಮದುವೆ ಆಗಿಲ್ಲ ಎಂಬ ಕುರಿತು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ನಟ ಪ್ರಭಾಸ್ ಮಾಧ್ಯಮಗಳೊಂದಿಗೆ ‘ರಾಧೆ ಶ್ಯಾಮ್’ ಸಿನಿಮಾದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಮಾಧ್ಯಮದವರೊಬ್ಬರು ಪ್ರಭಾಸ್ ಅವರನ್ನು ನೀವು ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ 'ಬಾಹುಬಲಿ', ನನ್ನ ಪ್ರೀತಿಯ ಭವಿಷ್ಯ ಯಾವಾಗಲೂ ತಪ್ಪಾಗಿರುತ್ತದೆ. ಅದಕ್ಕೆ ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಫನ್ನಿಯಾಗಿ ಹೇಳಿದರು. ಡಾರ್ಲಿಂಗ್ ಪ್ರಭಾಸ್ ಅವರ ಹಾಸ್ಯದ ಪ್ರತಿಕ್ರಿಯೆ ಎಲ್ಲರೂ ಜೋರಾಗಿ ನಗುವಂತೆ ಮಾಡಿತು.
ಮಾರ್ಚ್ 11 ರಂದು 'ರಾಧೆ ಶ್ಯಾಮ್' ಚಿತ್ರವು ತೆಲುಗು, ತಮಿಳ್, ಹಿಂದಿ, ಕನ್ನಡ, ಮಲಯಾಲಂ, ಜಪಾನ್, ಚೈನೀಸ್ ಭಾಷೆಯಲ್ಲಿ ತೆರೆ ಕಾಣಲಿದೆ.