ಕರ್ನಾಟಕ

karnataka

ETV Bharat / sitara

ಬಚ್‌ಪನ್ ಕಾ ಪ್ಯಾರ್.. ಸಖತ್​ ಸೌಂಡ್​ ಮಾಡ್ತಿದೆ ನಟಿ ಮೌನಿ ರಾಯ್​​​ ರೀಲ್ಸ್​.. - mouni roy latest news

ನಟಿ ಮೌನಿ ರಾಯ್​​​ ರೀಲ್ಸ್​ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ..

Bachpan Ka Pyaar fever hits Mouni Roy
ನಟಿ ಮೌನಿ ರಾಯ್​​​ ರೀಲ್ಸ್​

By

Published : Aug 21, 2021, 10:57 PM IST

ನಟಿ ಮೌನಿ ರಾಯ್​​​ ರೀಲ್ಸ್​ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ರ್ಯಾಪರ್ ಬಾದ್‌ಶಾ ಬಚ್‌ಪನ್ ಕಾ ಪ್ಯಾರ್ ಸಾಂಗ್​ ಅನ್ನು ಗಾಯಕ ಸಹದೇವ್ ಡಿರ್ಡೊ ಅವರೊಂದಿಗೆ ರಿಮಿಕ್ಸ್ ಮಾಡಿದ ನಂತರ ಮೌನಿ ರಾಯ್​​​ ತನ್ನ ಸ್ನೇಹಿತರೊಂದಿಗೆ ರೀಲ್ಸ್​ ಮಾಡಿದ್ದಾರೆ.

ಮಾಲ್ಡೀವ್ಸ್‌ನ ಅದ್ಭುತ ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದು, ಇದೀಗ ವಾರಾಂತ್ಯದ ಮೋಜು, ಮಸ್ತಿಯ ವಿಡಿಯೋವನ್ನು ಶೇರ್​​ ಮಾಡಿದ್ದಾರೆ. ನಾಗಿನ್ ನಟ ಕೂಡ ಬಚ್‌ಪನ್ ಕಾ ಪ್ಯಾರ್ ಸಾಂಗ್​ಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಬ್ರೇಕ್​ಫಾಸ್ಟ್​ ಚಾಲೆಂಜ್​ ಸಾಂಗ್​ಗೆ ಸ್ಟೆಪ್​ ಹಾಕಿರೋ ವಿಡಿಯೋವೊಂದನ್ನು ನಟಿ ಮೌನಿ ರಾಯ್ ಹಂಚಿಕೊಂಡಿದ್ದರು. ಇದೀಗ ಬಚ್‌ಪನ್ ಕಾ ಪ್ಯಾರ್ ಸಾಂಗ್​​ ನ ರೀಲ್ಸ್​​ ಸಖತ್​ ಸುದ್ದಿಯಲ್ಲಿದೆ.

ABOUT THE AUTHOR

...view details