ಜನ ಸಾಮಾನ್ಯರು ಮನೆಯಿಂದ ಹೊರಬಾರದೆ ಕೊರೊನಾ ವೈರಸ್ನಿಂದ ತಮ್ಮನ್ನು ಕಾಪಾಡಿಕೊಳ್ಳುತ್ತಿದ್ದರೆ, ವೈದ್ಯರು, ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರು, ಸರ್ಕಾರಿ ನೌಕರರು, ಪೊಲೀಸರು, ಮಾಧ್ಯಮದವರು ಮಾತ್ರ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಈ ನಡುವೆ ಜನರನ್ನು ಹೊರ ಬಾರದಂತೆ ಜಾಗೃತಿ ಮೂಡಿಸುವಲ್ಲಿ ಪೊಲೀಸರು ಭಾರೀ ಶ್ರಮ ಪಡುತ್ತಿದ್ಧಾರೆ. ಈ ಕಾರಣ ಬಾಲಿವುಡ್ ಸ್ಟಾರ್ಗಳು ಸೇರಿದಂತೆ ಬಹಳಷ್ಟು ಗಣ್ಯರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. 'ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಜನರಿಗಾಗಿ ಪೊಲೀಸರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಡಿಯೋವೊಂದನ್ನು ಮುಂಬೈ ಪೊಲೀಸ್ ಅಫಿಷಿಯಲ್ ಟ್ವಿಟ್ಟರ್ನಲ್ಲಿ ಶೇರ್ ಮಾಡಲಾಗಿತ್ತು.
ಇದಕ್ಕೆ ರೀ ಟ್ವೀಟ್ ಮಾಡಿರುವ ಬಾಲಿವುಡ್ ಸಿಂಗಂ ಅಜಯ್ ದೇವಗನ್ 'ಪ್ರಿಯ ಮುಂಬೈ ಪೊಲೀಸರೇ ಜಗತ್ತಿನಲ್ಲೇ ನೀವು ಬಹಳ ಶ್ರೇಷ್ಠ, ಕೊರೊನಾ ವಿರುದ್ಧ ಹೋರಾಡುತ್ತಿರುವ ನಿಮ್ಮ ಕೆಲಸವನ್ನು ನಿಜಕ್ಕೂ ವರ್ಣಿಸಲು ಸಾಧ್ಯವಿಲ್ಲ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿಮಗೆ ಬೇಕು ಎನಿಸಿದಲ್ಲಿ ಸಿಂಗಂ ಕೂಡಾ ಖಾಕಿ ತೊಟ್ಟು ನಿಮ್ಮೊಂದಿಗೆ ನಿಲ್ಲುತ್ತಾನೆ' ಎಂದು ಬರೆದುಕೊಂಡಿದ್ಧಾರೆ.