ಮುಂಬೈ: ಪಾರ್ಕೋಸ್ ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್ನಲ್ಲಿ ಬಿಟೌನ್ ಬೆಡಗಿಯರು ಸಖತ್ ಆಗಿಯೇ ಕಾಣುತ್ತಿದ್ದರು. ಎಲ್ಲರ ಮನ ಸೆಳೆಯುವಂತೆ ಬಿಟೌನ್ ಬೆಡಗಿರುವ ಉಡುಪುಗಳನ್ನು ತೊಟ್ಟು ಮಿರ ಮಿರ ಮಿಂಚುತ್ತಿದ್ದರು.
ಪಾರ್ಕೋಸ್ ಬ್ಯೂಟಿ ಇನ್‌ಫ್ಲುಯೆನ್ಸರ್ ಅವಾರ್ಡ್ಸ್ 2022 ಫಂಕ್ಷನ್ವೊಂದು ತಾರೆಗಳ ತಾಣವಾಗಿತ್ತು. ಹಲವಾರು ಸೆಲೆಬ್ರಿಟಿಗಳು ತಮ್ಮ ಮನಮೋಹಕ ಅವತಾರಗಳಲ್ಲಿ ಕಾಣಿಸಿಕೊಂಡರು. ನಟಿ ಅಲಯಾ ತಮ್ಮ ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್‌ನಲ್ಲಿ ಮಾದಕವಾಗಿ ಕಾಣುತ್ತಿದ್ದರು. ಯಾಮಿ ಗೌತಮ್ ಮೆಟಾಲಿಕ್ ವೆಸ್ಟ್‌ನೊಂದಿಗೆ ಸ್ಟೈಲಿಶ್ ಗೌನ್‌ನಲ್ಲಿ ಸಖತ್ ಮಿಂಚುತ್ತಿದ್ದರು.