ಮುಂಬೈ: ಮಕ್ಕಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸುವ ಕೆಲಸ ಮಾಡುವ ಸೆಲೆಬ್ರಿಟಿ ಅಡ್ವೋಕೇಟ್ ಆಗಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರನ್ನು ಯುನಿಸೆಫ್ ಇಂಡಿಯಾ ಆಯ್ಕೆ ಮಾಡಿದೆ.
ಆಯುಷ್ಮಾನ್ ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲಿದ್ದಾರೆ. ಸುರಕ್ಷಿತ ಬಾಲ್ಯವನ್ನು ಅನುಭವಿಸದ ಎಲ್ಲಾ ಮಕ್ಕಳ ಕುರಿತು ಆತಂಕವಿದೆ ಎಂದು ಆಯುಷ್ಮಾನ್ ಹೇಳಿದರು.
"ಸೆಲೆಬ್ರಿಟಿ ಅಡ್ವೋಕೇಟ್ ಆಗಿ ಯುನಿಸೆಫ್ ಜೊತೆ ಪಾಲುದಾರನಾಗಲು ನನಗೆ ತುಂಬಾ ಸಂತೋಷವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಆರಂಭಕ್ಕೆ ಅರ್ಹರು ಎಂದು ನಾನು ನಂಬುತ್ತೇನೆ. ಮಕ್ಕಳು ತಮ್ಮ ಮನೆಯ ಸುರಕ್ಷತೆಯಲ್ಲಿ ಮತ್ತು ಸಂತೋಷದಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ. ಸುರಕ್ಷಿತ ಬಾಲ್ಯವನ್ನು ಅನುಭವಿಸದ ಎಲ್ಲಾ ಮಕ್ಕಳ ಕುರಿತು ನನಗೆ ಆತಂಕವಿದೆ. ಮಕ್ಕಳಿಗೆ ಬೆಳೆಯಲು ಸುರಕ್ಷಿತ ಬಾಲ್ಯವನ್ನು ಕಲ್ಪಿಸುವುದು ಅಗತ್ಯ" ಎಂದು ಆಯುಷ್ಮಾನ್ ಹೇಳಿದ್ದಾರೆ.
ಮಕ್ಕಳ ಹಕ್ಕುಗಳಿಗಾಗಿ ಸೆಲೆಬ್ರಿಟಿ ಅಡ್ವೋಕೇಟ್ ಆಗಿರುವ ಆಯುಷ್ಮಾನ್ ಅವರನ್ನು ಭಾರತದ ಯುನಿಸೆಫ್ ಪ್ರತಿನಿಧಿ ಡಾ. ಯಾಸ್ಮಿನ್ ಅಲಿ ಹಕ್ ಅಭಿನಂದಿಸಿದ್ದಾರೆ.