ಮುಂಬೈ:ಬಾಲಿವುಡ್ ನಟ-ಸಹೋದರರಾದ ಆಯುಷ್ಮಾನ್ ಮತ್ತು ಅಪರಶಕ್ತಿ ಖುರಾನ ಅವರು ಆವೊ ಮಿಲೋ ಆಟವನ್ನು ಆಡಿರುವ ವಿಡಿಯೋ ಅನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಾಲ್ಯದ ದಿನಗಳನ್ನು ನೆನೆಪಿಸಿಕೊಂಡರು.
ಆಟ ಆಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅಪರಶಕ್ತಿ ಅವರು, ಈ ಹುಡುಗರಿಬ್ಬರು ಒಲಂಪಿಕ್ನಲ್ಲಿ ಭಾಗವಹಿಸಿದ್ದರೇ ಖಂಡಿತವಾಗಿಯೂ ಪದಕ ಗೆಲ್ಲುತ್ತಿದ್ದರು ಎಂದು ವಿಡಿಯೋಗೆ ಅಡಿ ಬರಹ ನೀಡಿದ್ದಾರೆ.
ಆವೊ ಮಿಲೋ ಒಲಂಪಿಕ್ ಕ್ರೀಡಾಕೂಟದಲ್ಲಿ ವಿಭಾಗಗಳಲ್ಲಿ ಒಂದಾಗಿದೆ. ಒಲಂಪಿಕ್ನಲ್ಲಿ ಈ ಇಬ್ಬರು ಹುಡುಗರು ಪಾಲ್ಗೊಂಡಿದ್ದರೇ ಖಂಡಿತವಾಗಿಯೂ ಪದಕ ಸಿಗುತ್ತಿತ್ತು. ಕೆಲವರು ಇದನ್ನು ಆವೊ ಮಿಲೋ ಶಿಲೋ ಶಾಲೋ ಎಂದೂ ಕರೆಯುತ್ತಾರೆ. ಆದರೆ, ನಾವು ಆಮ್ ಲೆಲೊ ಸೆಲಾಮ್ ಸಾಲಿ ಎಂದು ಕರೆಯುತ್ತೇವೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಸಹೋದರರಿಬ್ಬರು ಸದ್ಯ ಚಂಡೀಗಡದಲ್ಲಿ ಇರುವ ತಮ್ಮ ಮನೆಯಲ್ಲಿ ಇದ್ದಾರೆ. ಆಯುಷ್ಮಾನ್ ತಾನು ಸೈಕ್ಲಿಂಗ್ ಕೈಗೆತ್ತಿಕೊಂಡಿದ್ದೇನೆ ಮತ್ತು ತನ್ನ ಜೀವನದುದ್ದಕ್ಕೂ ಸೈಕ್ಲಿಂಗ್ ಉತ್ಸಾಹಿಯಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.