ರಾಜ್ ಶಾಂಡಿಲ್ಯ ನಿರ್ದೇಶನದಲ್ಲಿ ಆಯುಶ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಡ್ರೀಮ್ಗರ್ಲ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ಆಯುಷ್ಮಾನ್ ಖುರಾನ ಸೀರೆ ಧರಿಸಿ ಸ್ಕೂಟರ್ ಮೇಲೆ ಕುಳಿತಿರುವ ಫೋಟೋವೊಂದು ವೈರಲ್ ಆಗಿತ್ತು. ಈ ಪೋಸ್ಟರ್ ಚಿತ್ರದ ಮೇಲೆ ಕುತೂಹಲ ಹೆಚ್ಚಾಗಲು ಕಾರಣವಾಗಿತ್ತು.
ಸೀತೆಯ ಪಾತ್ರದಲ್ಲಿ ಆಯುಷ್ಮಾನ್.. ಡ್ರೀಮ್ ಗರ್ಲ್ ಟ್ರೇಲರ್ ನೋಡಿದ್ರೆ ನಕ್ಕೂ ನಕ್ಕು ಸುಸ್ತಾಗ್ತೀರ - ಮಹಾಭಾರತದ ದ್ರೌಪದಿ
ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ನಿರ್ಮಾಣದ 'ಡ್ರೀಮ್ಗರ್ಲ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆಯುಷ್ಮಾನ್ ಖುರಾನ ರಾಮಾಯಣದ ಸೀತೆ, ಕೃಷ್ಣಲೀಲಾದ ರಾಧೆ ಹಾಗೂ ಮಹಾಭಾರತದ ದ್ರೌಪದಿ, ಲವರ್ ಬಾಯ್ ಸೇರಿ ನಾಲ್ಕು ಶೇಡ್ಗಳಲ್ಲಿ ನಟಿಸಿದ್ದಾರೆ.
ರಾಮಾಯಣ ನಾಟಕದ ದೃಶ್ಯದ ಮೂಲಕ ಟ್ರೇಲರ್ ಆರಂಭವಾಗುತ್ತದೆ. ಈ ದೃಶ್ಯದಲ್ಲಿ ಆಯುಷ್ಮಾನ್ ಖುರಾನಾ ಸೀರೆ ಧರಿಸಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಎಂಬ ಹೆಸರಿನಲ್ಲಿ ಹೆಣ್ಣು ದನಿಯ ಮೂಲಕ ಗಂಡಸರಿಗೆ ಕರೆ ಮಾಡಿ ಅವರನ್ನು ಪ್ರೀತಿಯ ಬಲೆಯಲ್ಲಿ ಬೀಳುವಂತೆ ಮಾಡುವ ದೃಶ್ಯ ನಿಜಕ್ಕೂ ನಗು ತರಿಸುತ್ತದೆ. ಚಿತ್ರದಲ್ಲಿ ಆಯುಷ್ಮಾನ್ ಖುರಾನ ರಾಮಾಯಣದ ಸೀತೆ, ಕೃಷ್ಣಲೀಲಾದ ರಾಧೆ ಹಾಗೂ ಮಹಾಭಾರತದ ದ್ರೌಪದಿ, ಲವರ್ ಬಾಯ್ ಸೇರಿ ನಾಲ್ಕು ಶೇಡ್ಗಳಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ನಿರ್ಮಾಣದ ಈ ಸಿನಿಮಾ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುತ್ತಿದೆ.