ಕರ್ನಾಟಕ

karnataka

ETV Bharat / sitara

ಪ್ರಭಾಸ್​​ಗೆ ಎದುರಾಯ್ತು ಭಾಷೆ ಸಮಸ್ಯೆ... ಜಾಣ್ಮೆಯಿಂದ ಪಾರಾದ ಬುದ್ಧಿವಂತ ಬಾಹುಬಲಿ - ಟಾಲಿವುಡ್​ ಸೂಪರ್​ ಸ್ಟಾರ್ ಪ್ರಭಾಸ್​

ಬಹುನಿರೀಕ್ಷಿತ ಸಾಹೋ ಚಿತ್ರದ ಹಿಂದಿ ವರ್ಷನ್​​​ಗೆ ಡಾರ್ಲಿಂಗ್​ ಪ್ರಭಾಸ್​ ಅವರೇ ಡಬ್ ಮಾಡಿದ್ದಾರೆ. ಇದು ಅವರ ಹಿಂದಿ ಭಾಷೆಯ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ.

actor Prabhas

By

Published : Aug 12, 2019, 9:52 AM IST

ಟಾಲಿವುಡ್​ ಸೂಪರ್​ ಸ್ಟಾರ್ ಪ್ರಭಾಸ್​ ತಮಗೆ ಎದುರಾಗಿದ್ದ ಭಾಷೆ ಸಮಸ್ಯೆಯಿಂದ ಪಾರಾಗಿದ್ದಾರೆ. ಈ ನಟನ ಬುದ್ಧಿವಂತಿಕೆ ಎಲ್ಲರಿಂದ ಮೆಚ್ಚುಗೆ ಪಡಿದಿದೆ.

ಬಹುನಿರೀಕ್ಷಿತ ಸಾಹೋ ಚಿತ್ರದ ಹಿಂದಿ ವರ್ಷನ್​​​ಗೆ ಡಾರ್ಲಿಂಗ್​ ಪ್ರಭಾಸ್​ ಅವರೇ ಡಬ್ ಮಾಡಿದ್ದಾರೆ. ಇದು ಅವರ ಹಿಂದಿ ಭಾಷೆಯ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಸಾಹೋ ಚಿತ್ರದ ಟ್ರೇಲರ್​ ರಿಲೀಸ್ ಬಳಿಕ​​ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, 'ನಾನು ಹಿಂದಿಯಲ್ಲಿ ಬರೆಯುತ್ತೇನೆ ಹಾಗೂ ಓದುತ್ತೇನೆ. ಆದರೆ, ಸ್ಪಷ್ಟವಾಗಿ ಮಾತಾಡುವುದು ನನಗೆ ಕಷ್ಟ' ಎಂದರು. ಈ ವೇಳೆ ಸೌತ್ ಇಂಡಿಯಾ ಅಭಿಮಾನಿಗಳಿಗಾಗಿ ಹಿಂದಿಯಲ್ಲಿಯೇ ಮಾತಾಡುವಂತೆ ಒತ್ತಾಯಿಸಲಾಯಿತು. ತಮಗೆ ಎದುರಾದ ಈ ಗಂಡಾಂತರದಿಂದ ಎಸ್ಕೇಪ್ ಆಗಲು ಪ್ರಭಾಸ್ ಪ್ರಯತ್ನಿಸಿದರು. ಆದರೆ, ಮಾಧ್ಯಮದವರು ಬಿಡಲಿಲ್ಲ. ಈ ವೇಳೆ ತಮ್ಮ ಬುದ್ಧಿವಂತಿಕೆ ಉಪಯೋಗಿಸಿದ ಈ ಬಾಹುಬಲಿ 'ಜೈ ಹಿಂದ್' ಎಂದು ಕೂಗಿದರು.

ಟಾಲಿವುಡ್​ ರೆಬೆಲ್​​ನ ಸಮಯಪ್ರಜ್ಞೆ ಹಾಗೂ ಜಾಣತನದ ಉತ್ತರಕ್ಕೆ ಕಾರ್ಯಕ್ರಮದಲ್ಲಿದ್ದವರ ಮುಖದಲ್ಲಿ ನಗೆ ಮೂಡಿಸಿತು. ಜತೆಗೆ ಅಲ್ಲಿದ್ದವರೆಲ್ಲೂ ಪ್ರಭಾಸ್ ಅವರ ಈ ರಿಯಾಕ್ಷನ್​​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಹೋ, ಬಾಹುಬಲಿ ನಂತರ ಪ್ರಭಾಸ್​ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ. ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ನಟಿಸಿರುವ ಈ ಚಿತ್ರ ಇದೇ ತಿಂಗಳ 30 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ABOUT THE AUTHOR

...view details