ಜನ ಮೆಚ್ಚುಗೆಗೆ ಪಾತ್ರವಾಗಿರುವ ಅಂಕಿತಾ ಲೋಖಂಡೆ ಮತ್ತು ಶಾಹೀರ್ ಶೇಖ್ ಅಭಿನಯದ 'ಪವಿತ್ರ ರಿಶ್ತಾ' ಧಾರಾವಾಹಿ ತಂಡಕ್ಕೆ ನಟಿ ಅಶೀಮಾ ವರ್ಧನ್ ಸೇರಿಕೊಂಡಿದ್ದು, ಇದರಲ್ಲಿ ಮಾನವ್ ಗೆಳತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಆಕಾಂಕ್ಷಳಾಗಿ 'ಪವಿತ್ರ ರಿಶ್ತಾ'ಗೆ ಬಂದ ಅಶೀಮಾ ವರ್ಧನ್ - ಅಶೀಮಾ ವರ್ಧನ್ ಧಾರಾವಾಹಿ
'ಪವಿತ್ರ ರಿಶ್ತಾ' ಧಾರಾವಾಹಿ ತಂಡಕ್ಕೆ ನಟಿ ಅಶೀಮಾ ವರ್ಧನ್ ಸೇರಿಕೊಂಡಿದ್ದಾರೆ. ಈ ಸಿರಿಯಲ್ನಲ್ಲಿ ಮಾನವ್ ಕೆಲಸ ಮಾರುವ ಗ್ಯಾರೇಜ್ನ ಮಾಲೀಕನ ಮಗಳಾಗಿ ಅಶೀಮಾ ನಟಿಸಲಿದ್ದಾರೆ.
ಮಾನವ್ ಕೆಲಸ ಮಾರುವ ಗ್ಯಾರೇಜ್ನ ಮಾಲೀಕನ ಮಗಳಾಗಿ ಅಶೀಮಾ ನಟಿಸಲಿದ್ದಾರೆ. ಇದರಲ್ಲಿ ಆಕಾಂಕ್ಷಗಳಾಗಿ ಅಭಿನಯಿಸಲಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟಿ, ಇದು ನನ್ನ ಜೀವನದಲ್ಲಿ ಸ್ಮರಣೀಯವಾದ ಘಳಿಗೆ. ಇತಿಹಾಸ ಸೃಷ್ಟಿಸಿರುವ ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ಎರಡನೇ ಆವೃತಿಯ ಭಾಗವಾಗಿದ್ದಕ್ಕೆ ನನಗೆ ಖುಷಿ ಇದೆ.
2009 ರಲ್ಲಿ ಪ್ರಾರಂಭವಾದ ಧಾರಾವಾಹಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅಭಿಯನಯಿಸುತ್ತಿದ್ದರು. ಅವರ ಸಾವಿನ ನಂತರದ ಭಾಗದಲ್ಲಿ ಅಂಕಿತಾ ಲೋಖಂಡೆ, ಶಾಹೀರ್ ಶೇಖ್, ಉಷಾ ನಾಡಕರ್ಣಿ, ರಣದೀಪ್ ರೈ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಧಾರಾವಾಹಿ ಆಲ್ಟ್ಬಾಲಾಜಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.