ಅಸನ್ಸೋಲ್ (ಪಶ್ಚಿಮ ಬಂಗಾಳ): ಅಸನ್ಸೋಲ್ ಮೂಲದ ಶಿಲ್ಪಿ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೇಣದ ಪ್ರತಿಮೆಯನ್ನು ರಚಿಸಿದ್ದಾರೆ.
ಶಿಲ್ಪಿ ಸುಕಾಂಟೊ ರಾಯ್ ಅವರು ಸುಶಾಂತ್ ಸಿಂಗ್ ರಜಪೂತರನ್ನು ತುಂಬಾ ಮೆಚ್ಚಿದ್ದಾರೆ ಮತ್ತು ಮೃತ ತಾರೆಯ ನೆನಪಿಗಾಗಿ ಮಾಡಿದ ಪ್ರತಿಮೆಯನ್ನು ತಮ್ಮ ವಸ್ತು ಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಹೇಳಿದ್ದಾರೆ.
ಪ್ರತಿಮೆಯನ್ನು ರಚಿಸಲು ಸುಮಾರು 10 ಕೆಜಿ ಮೇಣವನ್ನು ಮೊಲ್ಡರ್‌ಗೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಸುಕಾಂಟೊ ರಾಯ್ ಪ್ರಸಿದ್ಧ ವ್ಯಕ್ತಿಗಳಾದ ನಟ ಅಮಿತಾಬ್ ಬಚ್ಚನ್ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆಗಳನ್ನೂ ಸಹ ರಚಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಮೇಣದ ಪ್ರತಿಮೆಯೊಂದಿಗೆ ಕಲಾವಿದ "ನಾನು ಸುಶಾಂತ್ರನ್ನು ತುಂಬಾ ಇಷ್ಟಪಡುತ್ತೇನೆ. ಅವರು ನಿಧನ ಹೊಂದಿರುವುದು ದುರದೃಷ್ಟಕರ. ಅವರ ನೆನಪಿಗಾಗಿ ನಾನು ಈ ಪ್ರತಿಮೆಯನ್ನು ನನ್ನ ಮ್ಯೂಸಿಯಂಗಾಗಿ ಮಾಡಿದ್ದೇನೆ" ಎಂದು ಹೇಳಿದ್ದಾರೆ. ಒಂದು ವೇಳೆ ಸುಶಾಂತ್ ಅವರ ಕುಟುಂಬವು ಅವರ ಪ್ರತಿಮೆಯನ್ನು ಕೋರಿದರೆ, ನಾನು ಹೊಸದನ್ನು ಮಾಡುತ್ತೇನೆ ಎಂದಿದ್ದಾರೆ.